ನಾಳೆಯಿಂದ ಜಾತ್ರಾ ಮಹೋತ್ಸವ

Basaveswar
Published on

ಮುರಗೋಡ: ಸಮೀಪದ ಹಿರೇಕೊಪ್ಪ ಕೆ.ಎಂ ಗ್ರಾಮದಲ್ಲಿ 19 ನೇ ವರ್ಷದ ಬಸವೇಶ್ವರ ಜಯಂತಿ ನಿಮಿತ್ತ ಏ.26ರಿಂದ 30ರ ವರೆಗೆ ಬಸವೇಶ್ವರ ರಥೋತ್ಸವ, ವಿಶ್ವಶಾಂತಿಗಾಗಿ ಕೋಟಿ ಜಪಯ ಹಾಗೂ ವೇದಾಂತ ಪರಿಷತ್​, ಪ್ರತಿದಿನ ವಿವಿಧ ಸ್ವಾಮೀಜಿಗಳಿಂದ ಪ್ರವಚನ ನಡೆಯಲಿದೆ. ಬೆಲಹೊಂಗಲದ ಶಿವಾನಂದ ಮಠದ ಮಹಾದೇವ ಸರಸ್ವತಿ ಸ್ವಾಮೀಜಿ, ಅಂತಾಪೂರ ಅಭಿನವ ಶ್ರದ್ಧಾನಂದ ಸ್ವಾಮೀಜಿ ನೇತತ್ವದಲ್ಲಿ ಜಾತ್ರಾ ಕಾರ್ಯಕ್ರಮಗಳು ಜರುಗಲಿವೆ. ಪ್ರತಿದಿನ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಕಳಸಾರೋಹಣ, ಪ್ರವಚನ, 30ರಂದು ಬೆಳಗ್ಗೆ ರುದ್ರಾಭಿಷೇಕ, ಆರತಿಯೊಂದಿಗೆ ಕುಂಭೋತ್ಸವ, ಎತ್ತುಗಳ ಮೆರವಣಿಗೆ, ಪಲ್ಲಕ್ಕಿ ಉತ್ಸವ, ಸಂಜೆ 5 ಗಂಟೆಗೆ ಯಕ್ಕುಂಡಿಯ ಕುಮಾರೇಶ್ವರ ಸಂಸ್ಥಾನ ವಿರಕ್ತಮಠದ ಪಂಚಾರ ಸ್ವಾಮೀಜಿ, ಹೊಸೂರ ಗುರುಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ ನೇತತ್ವದಲ್ಲಿ ರಥೋತ್ಸವ ಜರುಗಲಿದೆ. ಮುರಗೋಡ ಮಹಾಂತ ದುರದುಂಡೀಶ್ವರ ಮಠದ ನೀಲಕಂಠ ಸ್ವಾಮೀಜಿ ಸಾನ್ನಿಧ್ಯ, ನಯಾನಗರದ ಅಭಿನವ ಸಿದ್ಧಲಿಂಗ ಸ್ವಾಮೀಜಿ ಅಧ್ಯತೆ ವಹಿಸಲಿದ್ದಾರೆ. ಅನಗವಾಡಿಯ ಅನಸೂಯಾ ತಾಯಿ, ಸಾಗನೂರಿನ ಪಾರ್ವತೆಮ್ಮ ತಾಯಿ, ಮೆಟಗುಡ್ಡ ಶ್ರೀ ದೇವಿ ತಾಯಿ, ದಾಡಿಭಾಂವಿಯ ಮಲ್ಲಯ್ಯ ಸ್ವಾಮೀಜಿ ಆಗಮಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net