

ಬೆಲಹೊಂಗಲ: ಪಟ್ಟಣದ ಪತ್ರಿ ಬಸವೇಶ್ವರ ಅನುಭವ ಮಂಟಪದಲ್ಲಿ ಪತ್ರಿಬಸವ ನಗರ ಅಭಿವದ್ಧಿ ಸಂ, ಪತ್ರಿಬಸವೇಶ್ವರ ಶರಣ ಸಂಸತಿ ಉತ್ಸವ ಸಮಿತಿ ಆಶ್ರಯದಲ್ಲಿ 13ನೇ ಶರಣ ಸಂಸತಿ ಉತ್ಸವ& 2025 ಏ.28ರಿಂದ ಏ.30ರ ವರೆಗೆ ನಡೆಯಲಿವೆ. ಡಾ.ಅನುಪಮ ಜೋಶಿ ಹಾಗೂ ಓಂ ಸಂಗೀತ ಪಾಠಶಾಲೆ ವಿದ್ಯಾರ್ಥಿಗಳಿಂದ ಸಂಗೀತ ಸೇವೆ ಜರುಗಲಿದೆ.
ಏ.28ರಂದು ಬೆಳಗ್ಗೆ 9ಕ್ಕೆ ವಿಶ್ವನಾಥ ಹಿರೇಮಠ ದಂಪತಿ ಷಟಸ್ಥಲ ಧ್ವಜಾರೋಹಣ ನೆರವೇರಿಸುವರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯತೆ ವಹಿಸುವರು. ಶಿಕ ಬಸವರಾಜ ಮಾಟೋಳ್ಳಿ ಷಟಸ್ಥಲ ನುಡಿ ಹೇಳುವರು. ನಾಗನಗೌಡ ಪಾಟೀಲ, ಗಣ್ಯರು ಉಪಸ್ಥಿತರಿರುವರು.
ಸಂಜೆ 6ಕ್ಕೆ 29ನೇ ಮಾಸಿಕ ಅನುಭಾವ ಗೋಷ್ಠಿಯ ಸಾನ್ನಿಧ್ಯವನ್ನು ಮುರಗೋಡ ಶ್ರೀ ಮಹಾಂತ ದುರದುಂಡೀಶ್ವರ ಮಠದ ನೀಲಕಂಠ ಶ್ರೀ ವಹಿಸುವರು. ಬೆಳಗಾವಿ ಕಾರಂಜಿಮಠದ ಡಾ. ಶಿವಯೋಗಿ ದೇವರು ಆಶೀರ್ವಚನ ನೀಡುವರು. ಪತ್ರಿಬಸವೇಶ್ವರ ಅನುಭವ ಮಂಟಪದ ಅಧ್ಯೆ ಪ್ರೇಮಕ್ಕಾ ಅಂಗಡಿ ನೇತತ್ವ, ಗಣಾಚಾರಿ ಶಿಣ ಸಂಸ್ಥೆ ಅಧ್ಯ ಬಿ.ಬಿ.ಗಣಾಚಾರಿ ಅಧ್ಯತೆ ವಹಿಸುವರು. ಸಂಸದ ಜಗದೀಶ ಶೆಟ್ಟರ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಇತರರು ಭಾಗವಹಿಸುವರು.
ಏ.29ರಂದು ಬೆಳಗ್ಗೆ 8ರಿಂದ 10ರ ವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ. ಲಲಿತಾ ಪಾಟೀಲ ದಂಪತಿ ಷಟಸ್ಥಲ ಧ್ವಜಾರೋಹಣ ನೆರವೇರಿಸುವರು. ವೈದ್ಯಾಧಿಕಾರಿ ಡಾ.ನಿರ್ಮಲಾ ಮಹಾಂತಶೆಟ್ಟಿ ಉದ್ಘಾಟಿಸುವರು. ಡಾ.ಮಂಜುನಾಥ ಮುದಕನಗೌಡರ, ಡಾ.ಶರಣಕುಮಾರ ಅಂಗಡಿ, ಸುವರ್ಣಾ ಬಿಜಗುಪ್ಪಿ, ವೀರಭದ್ರ ಕಾಪ್ಸೆ, ಗಣ್ಯರು ಉಪಸ್ಥಿತರಿರುವರು.
ಸಂಜೆ 6ಕ್ಕೆ ದ್ವೀತಿಯ ಗೋಷ್ಠಿ ನಡೆಯಲಿದೆ. ನಿಡಸೋಸಿ ದುರದುಂಡೇಶ್ವರ ಮಠದ ಡಾ.ಪಂಚಮ ಶಿವಲಿಂಗೇಶ್ವರ ಶ್ರೀ ದಿವ್ಯ ಸಾನ್ನಿಧ್ಯ, ರುದ್ರಾಮಠದ ಬಸವಲಿಂಗ ಶ್ರೀ ನೇತತ್ವ, ಮೂರುಸಾವಿರ ಮಠದ ಪ್ರಭುನೀಲಕಂಠ ಶ್ರೀ ಸಮ್ಮುಖ, ಪುರಸಭೆ ಸದಸ್ಯ ಅರ್ಜುನ ಕಲಕುಟಕರ ಅಧ್ಯತೆ ವಹಿಸುವರು. ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಉದ್ಘಾಟಿಸುವರು. ಡಾ.ದಯಾನಂದ ನೂಲಿ ಅನುಭಾವ ನುಡಿ ಹೇಳುವರು. ನಿವತ್ತ ಪೊಲೀಸ್ ಅಧಿಕಾರಿ ಅಶೋಕ ಸಾಲಿ, ಶಸಾಪ ರಣ ತಾಲೂಕಾಧ್ಯ ಸಂತೋಷ ಕೊಳವಿ ಆಗಮಿಸುವರು.
ಏ.30ರಂದು ಬೆಳಗ್ಗೆ 7ಕ್ಕೆ ವಿಶ್ವಗುರು ಬಸವಣ್ಣನವರ ಜಯಂತಿ ಹಾಗೂ ಬಸವ ಮಹಾಪೂಜೆ, ತೊಟ್ಟಿಲೋತ್ಸವ ಮೆರವಣಿಗೆ ನಡೆಯಲಿದೆ. ಬೆಲವಾಡ ವರ್ತಿಮಠದ ಶಂಕರ ದೇವರು ಸಾನ್ನಿಧ್ಯ, ದುಂಡಯ್ಯ ಕುಲಕರ್ಣೀ ನೇತತ್ವವ ವಹಿಸುವರು. ವಿದ್ಯಾಶ್ರೀ ರಜಪೂತ, ಡಾ.ಅಮರಜೀತಸಿಂಗ್ ರಜಪೂತ ದಂಪತಿ ಧ್ವಜಾರೋಹಣ ನೆರವೇರಿಸುವರು. ಮಹಾಪ್ರಸಾದವಿದೆ.
ಸಂಜೆ 6ಕ್ಕೆ ತತೀಯ ಗೋಷ್ಠಿ ನಡೆಯಲಿದೆ. ರುದ್ರಾಮಠದ ಡಾ.ಅಲ್ಲಮಪ್ರಭು ಶ್ರೀ ಸಾನ್ನಿಧ್ಯ, ಕಸಾಪ ಜಿಲ್ಲಾಧ್ಯೆ ಮಂಗಲಾ ಮೆಟಗುಡ್ಡ ಅಧ್ಯತೆ ವಹಿಸುವರು. ರತ್ನಕ್ಕ ಶೆಟ್ಟರ ಉದ್ಘಾಟಿಸುವರು. ಡಾ.ಮೆತ್ರಾಯಿಣಿ ಗದಿಗೆಪ್ಪಗೌಡರ ಅನುಭಾವ ನುಡಿ ಹೇಳುವರು. ಜಿಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ, ನಿವತ್ತ ಶಿಕಿ ಮಲಪ್ರಭಾ ಪಾಟೀಲ, ಗಿರಿಜಾ ದೇವಲತ್ತಿ, ಚನ್ನಪ್ಪ ಶೆಟ್ಟರ ಅವರನ್ನು ಸನ್ಮಾನಿಸಲಾಗುವುದು. ಕದಳಿ ಮಹಿಳಾ ವೇದಿಕೆ ಗೌರವಾಧ್ಯೆ ಮೀನಾ ಕುಡಸೋಮಣ್ಣವರ, ಪುರಸಭೆ ಸದಸ್ಯೆ ಶ್ರೀದೇವಿ ದೇವಲಾಪೂರ, ಕಲಾವತಿ ಕಡಕೋಳ ಅತಿಥಿಯಾಗಿ ಆಗಮಿಸುವರು ಎಂದು ಶರಣೆ ಪ್ರೇಮಕ್ಕಾ ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.