ಸಂಸ್ಥೆಯಿಂದ ದೇವಸ್ಥಾನಗಳ ಜೀಣೋರ್ದ್ಧಾರ

27TLR1
Published on

ತಲ್ಲೂರ: ಸುಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಧಾರ್ಮಿಕ ೇತ್ರಗಳ ಜೀಣೋರ್ದ್ಧಾರಕ್ಕೆ ಸಹಾಯ ಮಾಡುತ್ತಿದ್ದಾರೆ. ಸ್ವಸಹಾಯ ಸಂಗಳ ರಚನೆಯಿಂದ ಜನರ ಸಬಲೀಕರಣಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದು ಯೋಜನೆ ಜಿಲ್ಲಾ ನಿರ್ದೇಶಕ ಲವಕುಮಾರ ಹೇಳಿದರು.

ಸಮೀಪದ ಸೋಮಾಪುರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯಿಂದ ಸಿದ್ಧಾರೂಢ ಮಠಕ್ಕೆ ಜೀಣೋರ್ದ್ಧಾರಕ್ಕಾಗಿ 3 ಲ ರೂ. ಮೊತ್ತದ ಚೆಕ್​ ವಿತರಿಸಿ ಮಾತನಾಡಿದರು.

ಜಯದೇವ ಸ್ವಾಮೀಜಿ ಮಾತನಾಡಿದರು. ಯೋಜನಾಧಿಕಾರಿ ಶ್ರೀಕಾಂತ, ವಲಯ ಮೇಲ್ವಿಚಾರಕ ನಾಗರಾಜ ಡಿ., ವಲಯ ಮೇಲ್ವಿಚಾರಕ ನಾಗರಾಜ ನಾಯ್ಕ, ಆರ್​.ಬಿ.ಅಣ್ಣಿಗೇರಿ, ಪ್ರಕಾಶ ನಾಯ್ಕರ, ಅರುಣ ಗೊರಾಬಾಳ, ಮಹಾದೇವ ಜಮನಾಳ, ದೇಮಪ್ಪ ದೇಸಾಯಿ, ಸಿದ್ಧಾರೂಢ ಗೊಟಿ, ದೇಮಪ್ಪ ಬುಶನ್ನವರ, ಮರಮೇಶ ನಾಯ್ಕರ, ಪಿ.ಎಸ್​.ನಾಯ್ಕರ, ಸಾಗರ ದೊಡಮನಿ, ಸುರೇಶ ನಾಯ್ಕರ, ಸಿದ್ದಪ್ಪ ಗೊರಬಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net