ಮಕ್ಕಳಿಂದ ಹಳ್ಳಿ ಸೋಗಡಿನ ಮಾರುಕಟ್ಟೆ ಅನಾವರಣ

13-SanduruP2
ಸಂಡೂರು ತಾಲೂಕು ಕೃಷ್ಣಾನಗರ ಸಮೀಪದ ಬಿಕೆಜಿ ಶಾಲೆಯ ಮಕ್ಕಳು ಗ್ರಾಮೀಣ ಸೊಗಡಿನ ಸಂತೆ ದಿನವನ್ನು ಆಚರಿಸಲಾಯಿತು. ಬಿಕೆಜಿ ಗ್ಲೋಬಲ್ ಕಾಲೇಜು ಪ್ರಾಂಶುಪಾಲರಾದ ಕೆ.ವಿ.ಮೋಹನ್ ರಾವ್, ಪ್ರಾಂಶುಪಾಲೆ ಶೋಭಾ ಮಿಶ್ರಾ ಇತರರಿದ್ದರು.
Published on

ಸಂಡೂರು: ಸಮೀಪದ ಕೃಷ್ಣಾನಗರ ಬಳಿಯ ವಿದ್ಯಾಸಂಸ್ಥೆ ಬಿಕೆಜಿ ಗ್ಲೋಬಲ್ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಂದ ಗ್ರಾಮೀಣ ಸೊಗಡಿನ ಸಂತೆ ದಿನವನ್ನು ಶುಕ್ರವಾರ ಆಚರಿಸಲಾಯಿತು.

ಗ್ರಾಮೀಣ ಸೊಗಡಿನ ಮಾರುಕಟ್ಟೆಯ ಚಿತ್ರಣವನ್ನು ಮಕ್ಕಳು ವಿವಿಧ ರೀತಿಯ ವ್ಯಾಪಾರಿ ವರ್ಗದವರಾಗಿ, ದಿನನಿತ್ಯದ ಅವಶ್ಯಕ ವಸ್ತುಗಳನ್ನು ಕೊಂಡುಕೊಳ್ಳಲು ಹಳ್ಳಿಯ ಜನರ ಉಡುಪಿನಲ್ಲಿ ಸೇರಿದ್ದು ವಿಶೇಷವಾಗಿತ್ತು.

ಇದು ಶಾಲಾ ಬಯಲು ಅವರಣದಲ್ಲಿ ಮಕ್ಕಳು ವಿವಿಧ ಬಗೆಯ ದಿನನಿತ್ಯದ ವಸ್ತುಗಳನ್ನು ಮಾರಾಟಕ್ಕಾಗಿ ತೆಗೆದುಕೊಂಡು ಬಂದಿದ್ದರು. ಅವುಗಳಲ್ಲಿ ಮುಖ್ಯವಾಗಿ ತರಕಾರಿ-ಪಲ್ಯೆ, ಹಾಲು, ಹಣ್ಣು, ಅಕ್ಕಿ, ಸಕ್ಕರೆ, ಬೇಳೆಕಾಳುಗಳು, ಎಣ್ಣೆ, ಕಸೂತಿ ನಿರ್ಮಿತ ಬಟ್ಟೆ, ದೇವಾಲಯ, ಗಿಣಿ ಶಾಸ್ತ್ರ, ಕಣಿ ಶಾಸ್ತ್ರ, ಪಂಚಾಯಿತಿ ಕಟ್ಟೆ, ಪ್ರಾಣಿ-ಪಕ್ಷಿಗಳ ಚಿತ್ರಣವನ್ನು ನೀಡಿದ್ದು, ಇಂದಿನ ನಗರ ಪ್ರದೇಶದ ಮಾರುಕಟ್ಟೆಯ ಚಿತ್ರಣವನ್ನು ಮೀರಿಸುವಂತಿತ್ತು.

ಮಕ್ಕಳು ಗ್ರಾಮೀಣ ಮಾರುಕಟ್ಟೆಯ ಮಹತ್ವದ ಜತೆಗೆ ಹಣದ ಮಹತ್ವ ಕುರಿತು ಗಣಿತಶಾಸತ್ರದಲ್ಲಿ ಎಣಿಕೆ, ಕಳೆಯುವುದು, ಕೂಡಿಸುವುದು, ಗುಣಿಸುವುದು ಕಂಡು ಬಂದಿತು. ಇದು ಅವರ ಸಮಯ ಮತ್ತು ಹಣದ ಉಳಿತಾಯದ ಬಗ್ಗೆ ಕೆಲವು ಸಾಮಾಜಿಕ ಮೌಲ್ಯಗಳನ್ನು ಅರಿಯಲು ಒಂದು ವೇದಿಕೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net