More

    ಹೈಟೆಕ್ ಮೀನು ಮಾರುಕಟ್ಟೆ ಆರಂಭ

    ಯಾದಗಿರಿ: ಕಟ್ಟಡ ನಿರ್ಮಾಣಗೊಂಡರು ಕೆಲ ಮೂಲಸೌಕರ್ಯದ ಅಭಾವದಿಂದಾಗಿ ಪಾಳು ಮಂಟಪವಾಗಿದ್ದ ಇಲ್ಲಿನ ಹೈಟೆಕ್ ಮೀನು ಮಾರುಕಟ್ಟೆ ಭಾನುವಾರ ಅಧಿಕೃತವಾಗಿ ಆರಂಭಗೊಂಡಿದ್ದು ಇದರಿಂದ ಮೀನುಗಾರರ ದಶಕದ ಕನಸು ನನಸಾದಂತಾಗಿದೆ.

    ಕೃಷ್ಣಾ, ಭೀಮಾ ನದಿಗಳು ಹರಿಯುವ ಯಾದಗಿರಿ ಜಿಲ್ಲೆಯಲ್ಲಿ ಮೀನುಗಾರಿಗೆ ಸಾಕಷ್ಟು ಅವಕಾಶಗಳಿವೆ. ಆದರೆ, ಜಿಲ್ಲಾಕೇಂದ್ರದಲ್ಲಿ ಮೀನು ಮಾರಾಟಕ್ಕೆ ಮಾರುಕಟ್ಟೆ ಇಲ್ಲದೆ ದೊಡ್ಡ ಸಮಸ್ಯೆಯಾಗುತ್ತು. ಇದರಿಂದ ಶಾಸ್ತ್ರಿ ವೃತ್ತದಲ್ಲೇ ಹಿಡಿದ ಮೀನುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಕಳೆದ 2022ರಲ್ಲಿ ಅಂದಿನ ಮೀನುಗಾರಿಕೆ ಸಚಿವ ಎಸ್.ಅಂಗಾರ ಮಾರುಕಟ್ಟೆ ಉದ್ಘಾಟಿಸಿದ್ದರು. ಆದರೆ ರಸ್ತೆ ಇಲ್ಲದ ಕಾರಣ ಸಾರ್ವಜನಿಕರಿಗೆ ಹಾಗೂ ವ್ಯಾಪಾರಿಗಳಿಗೆ ತೊಂದರೆಯಾಗಿತ್ತು.

    ಈ ಸಮಸ್ಯೆ ಬಗ್ಗೆ ವಿಜಯವಾಣಿ'ಸೌಲಭ್ಯ ವಂಚಿತ ಮೀನು ಮಾರುಕಟ್ಟೆ’ ತಲೆಬರಹದಡಿ ನಿರಂತರ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದನ್ನು ಮನಗಂಡು ರೂಪಿಸಿದ ಸುಮಾರು ವರ್ಷಗಳ ಹೋರಾಟಕ್ಕೆ ಇದೀಗ ಜಯ ಸಂದಿದೆ. ಕಲ್ಯಾಣ ಕರ್ನಾಟಕದಲ್ಲೇ ಇಲ್ಲದ ಹೈಟೆಕ್ ಮಾರುಕಟ್ಟೆ 1 ಕೋಟಿ.ರೂ. ವೆಚ್ಚದಲ್ಲಿ ನಿಮರ್ಾಣವಾಗಿದೆ. ಸಿಸಿ ರಸ್ತೆ ಮೂಲಸೌಕರ್ಯ ಎಲ್ಲವೂ ಒದಗಿಸಲಾಗಿದೆ. ಮಾರುಕಟ್ಟೆಯನ್ನು ಸ್ವಚ್ಛವಾಗಿಟ್ಟುಕೊಂಡು ಚೆನ್ನಾಗಿ ಅಭಿವೃದ್ಧಿ ಹೊಂದುವಂತೆ ಟೋಕರಿ ಕೋಲಿ ಸಮಾಜದ ಉಮೇಶ ಮುದ್ನಾಳ್ ಸಲಹೆ ನೀಡಿದರು.

    ಮೊದಲ ದಿನವೇ ವಿವಿಧ ತಳಿಯ 2.60 ಕ್ವಿಂಟಾಲ್ ಮೀನು ಮರಾಟವಾಗಿರುವುದು ದಾಖಲೆಯಾಗಿದೆ. ನಗರದಿಂದ ಮಾರುಕಟ್ಟೆ ವರೆಗೆ ಭಾಜಾ ಭಜಂತ್ರಿ ಮೂಲಕ ಮೀನುಗಾರರು ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts