ಶ್ವಾನಗಳ ದಾಳಿಯಿಂದ ಮಂಗ ರಕ್ಷಿಸಿದ ಯುವಕರು: ಮೆಚ್ಚುಗೆ ವ್ಯಕ್ತಪಡಿಸಿದ ಗ್ರಾಮಸ್ಥರು

dog
ಕೊಟ್ಟೂರು ತಾಲೂಕಿನ ಹುಣಸಿಕಟ್ಟೆ ಗ್ರಾಮದಲ್ಲಿ ಶುಕ್ರವಾರ ನಾಯಿಗಳ ದಾಳಿಗೆ ಒಳಗಾಗಿ ತೀವ್ರವಾಗಿ ಗಾಯಗೊಂಡ ಮಂಗವನ್ನು ಗ್ರಾಮದ ಯುವಕರಾದ ಮಾರೇಶ, ರಮೇಶ, ಕೊಟ್ರೇಶ, ಎಚ್. ಕೊಟ್ರೇಶ, ಅಂಜಿನಪ್ಪ ಕೊಟ್ಟೂರು ಪಶು ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿದರು.
Published on

ಕೊಟ್ಟೂರು: ಸಮೀಪದ ಹುಣಸಿಕಟ್ಟೆ ಗ್ರಾಮದಲ್ಲಿ ನಾಯಿಗಳ ದಾಳಿಗೆ ಒಳಗಾಗಿ ಗಾಯಗೊಂಡಿದ್ದ ಮಂಗವನ್ನು ಗ್ರಾಮದ ಯುವಕರು ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.


ಗ್ರಾಮದಲ್ಲಿ ಶುಕ್ರವಾರ ಮಂಗ ಮರವೇರಲು ಹೋಗುತ್ತಿದ್ದಾಗ ಏಕಾಏಕಿ ನಾಲ್ಕೈದು ಬೀದಿ ನಾಯಿಗಳು ದಾಳಿ ಮಾಡಿ ಕಚ್ಚುತ್ತಿದ್ದಿದ್ದನ್ನು ನೋಡಿದ ಯುವಕರು ತಕ್ಷಣ ನಾಯಿಗಳನ್ನು ಹೊಡೆದೋಡಿಸಿ ಮಂಗನನ್ನು ರಕ್ಷಿಸಿದ್ದಾರೆ. ನಾಯಿಗಳು ಮಂಗದ ಮುಖ, ಕಾಲು, ಹೊಟ್ಟೆ ಸೇರಿ ಕಂಡಕಂಡಲ್ಲಿ ಕಚ್ಚಿದ್ದರಿಂದ ಮಂಗ ರಕ್ತಮಯವಾಗಿ ನಿತ್ರಾಣಗೊಂಡಿತ್ತು.

ಜೀವನ್ಮರಣ ಸ್ಥಿತಿಯಲ್ಲಿದ್ದ ಮಂಗನನ್ನು ಯುವಕರು ಕೊಟ್ಟೂರು ಪಶು ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಎರಡು ದಿನ ಚಿಕಿತ್ಸೆ ಕೊಡಿಸಿದ್ದರಿಂದ ಮಂಗ ಚೇತರಿಸಿಕೊಂಡಿದ್ದು, ಇನ್ನೆರಡು ದಿನದಲ್ಲಿ ಪೂರ್ಣವಾಗಿ ಗುಣಮುಖವಾಗಲಿದೆ ಎಂದು ಪಶು ವೈದ್ಯ ಡಾ. ಕೊಟ್ರೇಶ ಹೇಳಿದರು.


ಅರಣ್ಯ ಇಲಾಖೆ ಗಾಯಗೊಂಡ ಮಂಗನನ್ನು ತಮ್ಮ ವಶಕ್ಕೆ ಪಡೆದು ಶುಶ್ರೂಷೆಯ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಸಕಾಲದಲ್ಲಿ ಮಂಗನನ್ನು ರಕ್ಷಿಸಿದ ಹುಣಸಿಕಟ್ಟೆ ಗ್ರಾಮದ ಮಾರೇಶ, ರಮೇಶ, ಕೊಟ್ರೇಶ, ಅಂಜಿನಪ್ಪ, ಎಚ್. ಕೊಟ್ರೇಶ ಸಮಯ ಪ್ರಜ್ಞೆಗೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net