

ಮೂಡಲಗಿ: ಶಿವಧ್ಯಾನದಿಂದ ಬದುಕಿನ ಅಂಧಕಾರ, ಅಹಂಕಾರ ಹಾಗೂ ಸಂಕಷ್ಟ ಕಳೆಯುತ್ತದೆ. ಜತೆಗೆ ಆದರ್ಶ ಮೌಲ್ಯದ ಸಮೃದ್ಧ ಬದುಕು ಪ್ರಾಪ್ತವಾಗುತ್ತದೆ ಎಂದು ಪ್ರಜಾಪಿತ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ರೇಖಾ ಅಕ್ಕನವರು ಹೇಳಿದರು.
ಪಟ್ಟಣದಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಾಶಿವರಾತ್ರಿ ದಿನ ಎಲ್ಲರೂ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆ ಮಾಡಬೇಕು. ಕಲ್ಯಾಣಕಾರಿ ಶಿವನ ಚೈತನ್ಯ ಶಕ್ತಿಯಿಂದ ಜಗತ್ತು ಸಮೃದ್ಧವಾಗಿದೆ. ಹೀಗಾಗಿ, ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸದ ತಳಹದಿಯ ಮೇಲೆ ಸುಂದರ ಬದುಕು ತಮ್ಮದಾಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಸವಿತಾ ಅಕ್ಕನವರು, ವೈ.ಬಿ.ಕುಲಿಗೋಡ, ಈರಪ್ಪ ಹಂದಿಗುಂದ, ಮಲ್ಲಿಕಾರ್ಜನ ಎಮ್ಮಿಶೆಟ್ಟರ, ಗುರುಲಿಂಗಪ್ಪ ಶೀಲವಂತ, ಶಿವಬಸು ಗುರುವ, ಬಾಲಶೇಖರ ಬಂದಿ, ಗೋಪಾಲ ಗಂಗರಡ್ಡಿ, ತುಂಗಾ ಸೋನವಾಲಕರ, ಬಸವ್ವ ಮದಗನ್ನವರ, ಕಮಲಾ ಶೀಲವಂತ, ಸುಮೀತ್ರಾ ಸೋನವಾಲಕರ, ಬೋರವ್ವ ನೇಮಗೌಡರ, ಮಹಾದೇವಿ ತಾಂವಶಿ, ರಜನಿ ಬಂದಿ, ಸರೋಜಾ ಹೊಸೂರ, ಕವಿತಾ ಸೋನವಾಲಕರ, ತಾರಾ ಸೋನವಾಲಕರ, ಯಲ್ಲವ್ವ ನೇಮಗೌಡರ, ಅನ್ನಪೂರ್ಣ ತುಪ್ಪದ ಇತರರಿದ್ದರು.