

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಅಪಾರ ಸಂಖ್ಯೆಯ ಭಕ್ತ ಸಮೂಹ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಯೊಂದಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ 45ನೇ ಜನ್ಮದಿನೋತ್ಸವವನ್ನು ತಾಲೂಕಿನ ಮುದ್ದೇನಹಳ್ಳಿಯ ಸದ್ಗುರು ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಯಲ್ಲಿ ಶುಕ್ರವಾರ ಅದ್ದೂರಿಯಾಗಿ ಆಚರಿಸಲಾಯಿತು.
ಇಲ್ಲಿನ ಪ್ರೇವಾಮೃತಂ ಸಭಾಂಗಣದಲ್ಲಿ ಎಲ್ಲರಿಗೂ ಸಿಹಿ ತಿಂಡಿಗಳ ವಿತರಣೆ, ದಿವ್ಯ ಸಂದೇಶ ಮತ್ತು ಪುಸ್ತಕ ಬಿಡುಗಡೆ ಮೂಲಕ ಸಂಭ್ರಮಿಸಲಾಯಿತು.
ಸ್ವಾರ್ಥವಿಲ್ಲದ ಸಣ್ಣ ಕಾರ್ಯವೂ ಸಹ ಮಹತ್ತರವಾದ ಫಲಿತಾಂಶಕ್ಕೆ ನಾಂದಿಯಾಗುತ್ತದೆ. ಸತ್ಕಾರ್ಯಗಳು ಎಂದೂ ವ್ಯರ್ಥವಾಗುವುದಿಲ್ಲ. ಸತ್ವದಲ್ಲಿ ನಡೆಯುತ್ತ ಸದಾಚಾರ ಸಂಪನ್ನನಾಗಿರುವಾಗ ಮುನ್ನಡೆಯುವ ಹಾದಿಯಲ್ಲಿ ಯಾವುದೇ ಭಯವಿರುವುದಿಲ್ಲ. ಅಜ್ಞಾನ ಅಂಧಕಾರಗಳು ಸೇರಿದಾಗ ವಾತ್ರವೇ ಭಯ ಮತ್ತು ಸಂಕೋಚ ಕಾಣಿಸಿಕೊಳ್ಳುತ್ತದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಸಂದೇಶದಲ್ಲಿ ತಿಳಿಸಿದರು.
ವಾಧವನೊಂದಿಗೆ ವಾಧವನಿಗಾಗಿ ವಾನವನು ಶ್ರಮಿಸಿದಾಗ ವಾಧವನಾಗಿಯೇ ಪರಿವರ್ತನೆಗೊಳ್ಳುತ್ತಾನೆ. ಸತ್ಕಾರ್ಯಗಳನ್ನು ಪ್ರೋತ್ಸಾಹಿಸುತ್ತಾ ಒಳ್ಳೆಯ ವಿಚಾರಗಳು ಮತ್ತು ಕಾರ್ಯಗಳಿಗೆ ಪ್ರೇರಣೆ ನೀಡುವವರೇ ನಿಜವಾದ ಗುರುಗಳು. ಇಂತಹ ಮಹನೀಯರ ಹೆಜ್ಜೆ ಗುರುತಿನಲ್ಲಿ ಸಾಗಬೇಕು. ಭಾವನಾತ್ಮಕವಾಗಿ ತುರ್ತು ಅವಶ್ಯಕತೆಗಳಿಗೆ ಸ್ಪಂದಿಸಬೇಕು ಎಂದರು.
ವಾನವೀಯ ಕಾರ್ಯಗಳೆಲ್ಲವೂ ಪರಿವರ್ತನೆ ಮತ್ತು ಸುಧಾರಣೆಗಾಗಿ ಲೋಕಕ್ಕೆ ಸಮರ್ಪಿತವಾಗಿದ್ದು, ನಿರ್ಭೀತರಾಗಿ ನಿಸ್ವಾರ್ಥದಿಂದ ಸೇವೆಗೈಯ್ಯುತ್ತ ಜಗದ ಪರಿವರ್ತನೆಯ ರಾಯಭಾರಿಗಳಾಗಬೇಕು ಎಂದರು.
ಅಮೆರಿಕದ ಹಾರ್ಡ್ ರಾಕ್ ಕೆಫೆ ಸಂಸ್ಥಾಪಕ ಡಾ.ಐಸಾಕ್ ಟೈಗ್ರೆಟ್ ವಾತನಾಡಿ, ಶ್ರೀ ಸತ್ಯಸಾಯಿ ಮತ್ತು ಮಧುಸೂದನ ಸಾಯಿ ಅವರ ವಾನವೀಯ ಕಾರ್ಯಗಳು ಜಗತ್ತಿಗೆ ವಾದರಿ. ಸ್ವಾರ್ಥವಿಲ್ಲದ ಕಾರ್ಯದಿಂದ ಬದುಕು ಸದಾ ಆನಂದಮಯ ಹಾಗೂ ಅರ್ಥಪೂರ್ಣ ಎಂಬುದನ್ನು ಇಲ್ಲಿನ ಅನುಭವದಿಂದ ತಿಳಿದುಕೊಂಡಿದ್ದು, ಭಾರತ ಅನೇಕ ಸಂತರ ನೆಲೆಬೀಡು ಎಂದರು.
ಸತ್ಯಸಾಯಿ ವಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ.ಎಂ.ನರಸಿಂಹಮೂರ್ತಿ ಮಾತನಾಡಿ, ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ 45ನೇ ಜನ್ಮದಿನೋತ್ಸವ ಮತ್ತು ಸದ್ಗುರು ಶ್ರೀ ಮಧುಸೂದನ ಸಾಯಿ 45ನೇ ವದರ್ಂತಿ ಉತ್ಸವ ಎರಡನ್ನೂ ನೋಡಿದ ಭಾಗ್ಯಶಾಲಿಯಾಗಿದ್ದು, ಇಬ್ಬರು ಮಹಾತ್ಮರ ಸಮಕಾಲೀನರಾಗಿ, ನಿಸ್ಸಂದೇಹವಾಗಿಯೂ ಮುಕ್ತಿಗೆ ಬೇಕಾದ ಪುಣ್ಯವನ್ನು ಸಂಪಾದಿಸಿದ್ದೇನೆ ಎಂದರು.
ಮಾರ್ಗದರ್ಶನದಲ್ಲಿ ಸಾಗೋಣ
ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಮತ್ತು ಸದ್ಗುರು ಶ್ರೀ ಮಧುಸೂದನ ಸಾಯಿ ಅವರಲ್ಲಿ ನಿಸ್ವಾರ್ಥಪರತೆ, ಕಾರುಣ್ಯ ಹಾಗೂ ನಿಷ್ಕಲ್ಮಷ ಪ್ರೇಮ, ದಿವ್ಯ ಪ್ರಜ್ಞೆ, ಅಂತರಾತ್ಮದ ಕಡೆಗೆ ಪ್ರತಿಯೊಬ್ಬರನ್ನೂ ಸೆಳೆದು ಕಲ್ಯಾಣದ ಕಡೆಗೆ ಸಾಗಿಸುವ ಏಕರೂಪದ ನಾಲ್ಕು ಸವಾನ ಗುಣಗಳನ್ನು ಕಂಡಿದ್ದು, ಈ ಇಬ್ಬರು ಮಹಾತ್ಮರು ಕಾಲ ಕಾಲಕ್ಕೆ ಬಂದ ಮಹಾಪ್ರವಾದಿಗಳ ಪ್ರತಿರೂಪ. ಇವರು ಹಾಕಿಕೊಟ್ಟ ವಾದರಿಯ ಹಾದಿಯಲ್ಲಿ ನಡೆಯುವುದೇ ಸೌಭಾಗ್ಯ ಎಂದು ಡಾ.ಐಸಾಕ್ ಟೈಗ್ರೆಟ್ ಬಣ್ಣಿಸಿದರು.
ದಿವ್ಯ ಕಥಾಮೃತ ಬಿಡುಗಡೆ
ಸದ್ಗುರು ಶ್ರೀ ಮಧುಸೂದನ ಸಾಯಿ ವಿರಚಿತ ಆತ್ಮಚರಿತ್ರೆ ‘ಸ್ಟೋರಿ ಡಿವೈನ್-3‘ (ದಿವ್ಯಕಥಾಮತ) ಕೃತಿಯನ್ನು ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಸದ್ಗುರು ಸ್ಮರಣೆಯಲ್ಲಿ ಗುರುವಾರ ಗ್ರಾಮ ಸೇವೆ ಮತ್ತು ಎರಡನೇ ದಿನ ಶುಕ್ರವಾರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಶುಭಾಶಯಗಳ ಮಹಾಪೂರ
ಸದ್ಗುರು ಶ್ರೀ ಮಧುಸೂದನ ಸಾಯಿ ಜನ್ಮದಿನದ ಹಿನ್ನೆಲೆಯಲ್ಲಿ ಭಕ್ತ ಸಮೂಹದಿಂದ ಶುಭಾಶಯಗಳ ಸಂದೇಶ ಮತ್ತು ಮಹಾಪೂರ ಮನವಿಯ ಪತ್ರಗಳು ಸಂದಾಯವಾದವು. ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಯಲ್ಲಿ ಎರಡು ದಿನ ಅದ್ದೂರಿಯಾಗಿ ವಿವಿಧ ಕಾರ್ಯಕ್ರಮ ನಡೆದಿದ್ದು, ದೇಶ ವಿದೇಶಗಳಿಂದ ಭಕ್ತರು ಮತ್ತು ಸತ್ಯಸಾಯಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೊದಲು ಗುರುವಾರ ಗ್ರಾಮ ಸೇವೆಯ ಮೂಲಕ ಜನ್ಮದಿನದ ಸಂಭ್ರಮವನ್ನು ಆಚರಿಸಲಾಯಿತು. 1 ಸಾವಿರಕ್ಕೂ ಹೆಚ್ಚು ಜನರು 36 ಗ್ರಾಮಗಳಿಗೆ ತೆರಳಿ, ಸ್ಥಳೀಯ ಜನರಿಗೆ ಸಿಹಿ ತಿಂಡಿ, ವಸ ಮತ್ತು ಪುಸ್ತಕವನ್ನು ಕೊಟ್ಟು ಬಂದಿದ್ದು, ಸತ್ಕಾರಕ್ಕೆ ಪ್ರತಿ ವರ್ಷದಂತೆ ಮೆಚ್ಚುಗೆ ವ್ಯಕ್ತವಾಯಿತು.
ಸಂಗೀತ, ಭಜನೆಯ ಆರಾಧನೆ
ಪ್ರೇಮಾಮೃತಂ ಸಭಾಂಗಣದಲ್ಲಿ ಸದ್ಗುರು ಸಮ್ಮುಖದಲ್ಲಿ ಅಂತಾರಾಷ್ಟ್ರೀಯ ಖ್ಯಾತ ಗಾಯಕ ಸುಮೀತ್ ನೇತೃತ್ವದ ತಂಡವು ರಾಧಾಕೃಷ್ಣ, ರಾಮ, ಸತ್ಯಸಾಯಿ ಸೇರಿ ವಿವಿಧ ಕೀರ್ತನೆಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟಿತು. ಸುಶ್ರಾವ್ಯ ಹಾಡಿಗೆ ಭಕ್ತರು ತಲೆದೂಗಿದರು.
ಭಕ್ತರ ಬಯಕೆ ಆಲಿಸಿದ ಶ್ರೀಗಳು
ಸದ್ಗುರುಗಳು ಹುಟ್ಟು ಹಬ್ಬದ ದಿನದಂದು ಭಕ್ತ ಸಮೂಹದ ನಡುವೆ ತೆರಳಿ ಶುಭಾಶಯ ಸಂದೇಶ ಪತ್ರಗಳನ್ನು ಸ್ವೀಕರಿಸಿ, ಆಶೀರ್ವದಿಸಿದರು. ಇದೇ ವೇಳೆ ಹಲವರು ಮನದಾಳ ಬಯಕೆಯ ಮನವಿಯ ಪತ್ರಗಳನ್ನು ನೀಡಿದರು. ಹಾಗೆಯೇ ವಿಚಾರಗಳನ್ನು ಪ್ರಸ್ತಾಪಿಸಿ, ಸಲಹೆ ಪಡೆದುಕೊಂಡು ಖುಷಿಪಟ್ಟರು. ಭಕ್ತರು ತಂದಿದ್ದ ಕೇಕುಗಳನ್ನು ಕತ್ತರಿಸಿ, ವಿಶೇಷ ದಿನದ ಸಂಭ್ರಮವನ್ನು ಸದ್ಗುರುಗಳು ಹಂಚಿಕೊಂಡರು.
ವಿದ್ಯಾರ್ಥಿಗಳ ವೇದ ೋಷ
ಸತ್ಯಸಾಯಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ವೇದಮಂತ್ರಗಳ ೋಷಣೆಯು ಮೊಳಗಿತು. ಉಯ್ಯಲೆಯಲ್ಲಿ ಆಸೀನರಾಗಿದ್ದ ಸದ್ಗುರುವಿಗೆ ಭಕ್ತರು ಆರತಿ ಬೆಳಗಿ ಪ್ರಾರ್ಥಿಸಿದರು.