

ಮುನವಳ್ಳಿ: ವಿದ್ಯಾರ್ಥಿಗಳು ನಿರಂತರವಾಗಿ ಓದುವುದರಿಂದ ಜ್ಞಾನದ ಜತೆಗೆ ಸೃಜನಶೀಲತೆ ಹೆಚ್ಚಾಗುತ್ತದೆ. ಗುರಿ ಸಾಧನೆ ಸುಲಭವಾಗುತ್ತದೆ ಎಂದು ನಿವತ್ತ ಪ್ರಾಚಾರ್ಯ ಡಾ.ವೈ.ಎಂ. ಯಾಕೊಳ್ಳಿ ಹೇಳಿದರು.
ಪಟ್ಟಣದ ಜೆಎಸ್ಪಿ ಸಂದ ಅಜ್ಜಪ್ಪ ಗಡಮಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಬಿಎ, ಬಿಕಾಂ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು. ಗ್ರಾಮೀಣ ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ವಿಶೇಷ ಸಾಧನೆ ಮಾಡಬೇಕು ಎಂದರು.
ಸಂಸ್ಥೆ ಕೋಶಾಧ್ಯ ರವೀಂದ್ರ ಯಲಿಗಾರ ಮಾತನಾಡಿ, ವಿದ್ಯಾರ್ಥಿಗಳು ಅವಕಾಶ ಬಳಸಿಕೊಂಡು ಬದುಕು ರೂಪಿಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಡಾ.ಎಂ.ಎಸ್. ಬಾಗೇವಾಡಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಎಸ್.ಆರ್. ವನಹಳ್ಳಿ, ವಿ.ಎಂ. ಸೂರ್ಯವಂಶಿ, ಎಸ್.ಎಂ. ನಡುವಿನಮನಿ ಸೇರಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಸ್ಥೆ ಚೇರ್ಮನ್ ಎಂ.ಆರ್.ಗೋಪಶೆಟ್ಟಿ ಅಧ್ಯತೆ ವಹಿಸಿದ್ದರು. ಆಡಳಿತಾಧಿಕಾರಿ ಅಮಿತ ಕರೀಕಟ್ಟಿ, ಸುಧಾಕರ ರೇಣಕೆ, ಉಪನ್ಯಾಸಕರಾದ ಶ್ರೀಧರ ಯಲಿಗಾರ, ಎಸ್.ಪಿ. ಕಾಮಣ್ಣವರ, ಪಿ.ಬಿ.ಪಾಟೀಲ, ಎಸ್.ಪಿ. ಗೋಪಶೆಟ್ಟಿ, ಟಿ.ಎ. ತುಪ್ಪಳ್ಳಿ. ಬಿ.ಎಲ್. ರಾಯನಗೌಡ್ರ, ಬಿ.ಜಿ. ಜಾವೂರ, ಯು.ಎಲ್. ಕಂಕಣವಾಡಿ, ಡಿ.ಎಂ. ಅಗಸಿಮನಿ, ಮಂಜುನಾಥ ಕಂಬಾಳಿಮಠ, ದ್ಯಾಮಣ್ಣ ಬಸಲಿಗುಂದಿ ಇತರರಿದ್ದರು.