ಪುರಾಣ, ಪ್ರವಚನಗಳಿಂದ ಮನಸ್ಸು ಶುದ್ಧಿ

27blh2 dannammadevi
Published on

ಬೈಲಹೊಂಗಲ: ಪುರಾಣ& ಪ್ರವಚನ, ಪುಣ್ಯಕಥೆಗಳು ಮನಸನ್ನು ಶುದ್ಧಗೊಳಿಸುತ್ತವೆ ಎಂದು ಮುನವಳ್ಳಿ ಸೋಮಶೇಖರಮಠದ ಮುರುರಾಜೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ದಾನಮ್ಮದೇವಿ ದೇವಸ್ಥಾನದ 16ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಅಂಗವಾಗಿ ಈಚೆಗೆ ಜರುಗಿದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಡಿವಾಳೇಶ್ವರ ಮಠದ ಮಡಿವಾಳೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ತಂತ್ರಜ್ಞಾನದಲ್ಲಿ ಪ್ರತಿಯೊಬ್ಬರೂ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಮನಸ್ಸಿಗೆ ನೆಮ್ಮದಿ, ಶಾಂತಿ ಇಲ್ಲದೆ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದರು.

ಪ್ರವಚನಕಾರ ಗೋಕಾಕ ಕಪರಟ್ಟಿಯ ಶ್ರೀ ಗುರು ಮಹಾದೇವ ಆಶ್ರಮದ ಬಸವರಾಜ ಶ್ರೀ, ಶ್ರೀ ದಾನಮ್ಮದೇವಿ ದೇವಸ್ಥಾನ ಟ್ರಸ್ಟ್​ ಕಮಿಟಿ ಅಧ್ಯ ಪ್ರಮೋದಕುಮಾರ ವಕ್ಕುಂದಮಠ ಅಧ್ಯತೆ ವಹಿಸಿದ್ದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯ ಹೇಮಲತಾ ಹಿರೇಮಠ, ಸದಸ್ಯೆ ಲಕ್ಷಿ$್ಮ ಬಡ್ಲಿ, ಮಡ್ಡೆಪ್ಪ ಶಿರಕೋಳ, ಮಹಾಂತೇಶ ರಾಜಗೋಳಿ, ಈಶ್ವರ ಶಿಲ್ಲೇದಾರ, ವಿ.ಕೆ.ಬಡ್ಲಿ, ಬಿ.ಎಂ.ಮೂಲಿಮನಿ, ಎಂ.ಬಿ.ರೊಟ್ಟಿ, ಬಿ.ಸಿ.ಕರೀಕಟ್ಟಿ, ನೀಲಪ್ಪ ಕಲ್ಲೂರ, ಈಶ್ವರ ಅಂಗಡಿ, ಜಿ.ಬಿ.ಶೀಗಿಹಳ್ಳಿ, ಜಗದೀಶ ಜಂಬಗಿ, ಬಸಯ್ಯ ಹಿರೇಮಠ, ವಿ.ಎ. ಅಣ್ಣಿಗೇರಿ, ಈರಪ್ಪ ಸತ್ತಿಗೇರಿ, ಬಸವರಾಜ ತಲ್ಲೂರ, ಅನಿಲ ರಾಜಣ್ಣವರ, ಮಹಾಂತೇಶ ಹುಣಶೀಕಟ್ಟಿ,

ವಿ.ಎಂ.ಹಣಬರಟ್ಟಿ ಇದ್ದರು. ಜಿ.ಜಿ.ಸಾಲಿ ಪ್ರಾಸ್ತಾವಿಕ ಮಾತನಾಡಿದರು. ಸವಿತಾ ರೊಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net