ಲೋಕಾಪುರದಿಂದ ಧಾರವಾಡಕ್ಕೆ ರೈಲ್ವೆ ಕಲ್ಪಿಸಲಿ

18RAM1
Published on

ರಾಮದುರ್ಗ: ಲೋಕಾಪುರದಿಂದ ರಾಮದುರ್ಗ ಮಾರ್ಗವಾಗಿ ಧಾರವಾಡ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಆಗ್ರಹಿಸಿ ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಶುಕ್ರವಾರ ಹುಬ್ಬಳ್ಳಿಯ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಮುಕುಲ್​ ಮಾಥೂರಗೆ ಮನವಿ ಸಲ್ಲಿಸಿದರು.

ತಾಲೂಕಿನ ಸುೇತ್ರ ಗೊಡಚಿ ವೀರಭದ್ರೇಶ್ವರ, ಸವದತ್ತಿ ತಾಲೂಕಿನ ಯಲ್ಲಮ್ಮದೇವಿ ದೇವಸ್ಥಾನ, ಶಿರಸಂಗಿ ಕಾಳಿಕಾದೇವಿ ದೇವಸ್ಥಾನ, ಶಬರಿಕೊಳ್ಳಕ್ಕೆ ರಾಜ್ಯದ ಮೂಲೆ, ಮೂಲೆಗಳಿಂದ ಜನತೆ ಆಗಮಿಸುತ್ತಾರೆ. ಲೋಕಾಪುರದಿಂದ ರಾಮದುರ್ಗ ಮಾರ್ಗವಾಗಿ ಧಾರವಾಡವರೆಗೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಒತ್ತಾಯಿಸಿ 20 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ ಸರ್ಕಾರಗಳು ಕಡೆಗಣಿಸುತ್ತಿವೆ ಎಂದು ಆರೋಪಿಸಿದರು. 2024 ನವೆಂಬರ್​ನಲ್ಲಿ ರಾಮದುರ್ಗ ಮತ್ತು ಸವದತ್ತಿಯಲ್ಲಿ ಬಹತ್​ ಹೋರಾಟ ನಡೆಸಿ ಯೋಜನೆ ಅನುಷ್ಠಾನಕ್ಕೆ ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ. ರೈಲ್ವೆ ಸಚಿವ ಅಶ್ವಿನ ವೆಷ್ಣವ ಅವರು ಮಾರ್ಗ ನಿರ್ಮಾಣದ ಮರುಸಮೀೆೆ ಪರಿಶೀಲಿಸುವಂತೆ ನಿರ್ದೇಶಿಸಿದ್ದಾರೆ.

ಅಧಿಕಾರಿಗಳು ಶ್ರೀ ರೈಲ್ವೆ ಮಾರ್ಗ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಸಮಿತಿ ಮುಖಂಡರಾದ ಕುತುಬುದ್ದೀನ್​ ಖಾಜಿ, ಗೆಬು ಜೆನೆಖಾನ್​, ಎಂ.ಕೆ. ಯಾದವಾಡ, ಪ್ರೊ. ಎಸ್​.ಜಿ. ಚಿಕ್ಕನರಗುಂದ, ಶಶಿಕಾಂತ ನೆಲ್ಲೂರ, ಡಿ.ಎ್​. ಹಾಜಿ, ದಾದಾಪೀರ್​ ಕೆರೂರ, ಸವದತ್ತಿ ಮುಖಂಡರಾದ ಬಸವರಾಜ ಕಪ್ಪನ್ನವರ, ಶಂಕ್ರೆಪ್ಪ ತೊರಗಲ್​, ರಾಜಶೇಖರ ನಿಡೋಜಿ, ಬಾಗಲಕೋಟೆ ಮುಖಂಡರಾದ ಮೆನುದ್ದೀನ್​ ಖಾಜಿ, ಮಂಜುಳಾ ಬೋಕರೆ, ಪ್ರೇಮಾ ರಾಠೋಡ, ಮಮತಾಜ್​ ಸುತಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net