ಇಂಗುಗುಂಡಿಗಳಿಂದ ಅಂತರ್ಜಲ ಹೆಚ್ಚಳ

2RAM1
Published on

ರಾಮದುರ್ಗ: ರೈತರು ಮಳೆ ನೀರು ಹಾಗೂ ಅನವಶ್ಯಕವಾಗಿ ಹರಿಯುವ ನೀರನ್ನು ಇಂಗುಗುಂಡಿಗಳ ಮೂಲಕ ತಮ್ಮ ಜಮೀನು ಬಿಟ್ಟು ಹೋಗದಂತೆ ಇಂಗಿಸುವುದರದಿಂದ ಕೊಳವೆಬಾವಿಗಳ ನೀರು ಹೆಚ್ಚಾಗುವ ಜತೆಗೆ ಅಂತರ್ಜಲ ವೃದ್ಧಿಸಲು ಸಾಧ್ಯ ಎಂದು ಸಹಾಯಕ ಕಷಿ ನಿರ್ದೇಶಕ ಎಸ್​.ಎ್​. ಬೆಳವಟಗಿ ಹೇಳಿದರು.

ತಾಲೂಕಿನ ಮುದಕವಿ ಗ್ರಾಮದ ಸಾವಯವ ಕಷಿಕ ಶಿವಾನಂದ ಮಠಪತಿ ಅವರ ಜಮೀನಿನಲ್ಲಿ ಕಷಿ ಇಲಾಖೆ, ಜಿಲ್ಲಾ ಕಷಿ ತರಬೇತಿ ಕೇಂದ್ರ ಅರಬಾವಿ, ಬೆಳಗಾವಿ ಅಟಲ್​ ಭೂಜಲ ಯೋಜನೆ ಸಹಭಾಗಿತ್ವದಲ್ಲಿ ಅಂತರ್ಜಲ ನಿರ್ವಹಣೆ ಕುರಿತು ಶನಿವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಅಟಲ್​ ಯೋಜನೆಯ ಜಿಲ್ಲಾ ಜಲತ ಅಯ, ಅರಬಾವಿ ಸಂಶೋಧನಾ ಕೇಂದ್ರದ ಡಾ.ಪಿ.ಎಸ್​. ಕಾನಣ್ಣವರ, ಸಾವಯವ ಕಷಿಕ ಹಾಗೂ ಪ್ರಗತಿಪರ ರೈತ ಶಿವಾನಂದ ಮಠಪತಿ, ಜೆನ್​ ಇರಿಗೇಷನ್ಸ್​ನ ಭೀಮಚಾಯ ನಾಯಕ ಅವರು ವಿವಿಧ ವಿಷಯಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.

ಎಬಿಐ ಯೋಜನೆಯ ಬೆಳಗಾವಿಯ ದೀಪಕ ಕಮತರ, ಜಿಲ್ಲಾ ಕಷಿ ತರಬೇತಿ ಕೇಂದ್ರದ ಸಹಾಯಕ ಕಷಿ ನಿರ್ದೇಶಕರಾದ ಲೀಲಾ ಕೌಜಗೇರಿ, ಕಷಿ ಅಧಿಕಾರಿ ಎಂ.ಎಸ್​ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net