

ಚಿಕ್ಕೋಡಿ: ಮಾಧ್ಯಮಿಕ ಶಾಲಾ ಮಟ್ಟದಲ್ಲಿ ವಿವಿಧ ಸ್ಪರ್ಧೆ ಆಯೋಜಿಸುವುದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಸಿಎಲ್ಇ ಸಂಸ್ಥೆಯ ಜಂಟಿ ಕಾರ್ಯದರ್ಶಿ ಎನ್.ಎಸ್.ವಂಟಮುತ್ತೆ ಹೇಳಿದರು.
ಇಲ್ಲಿನ ಸಿಎಲ್ಇ ಸಂಸ್ಥೆಯ ಎಂ.ಕೆ.ಕವಟಗಿಮಠ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ರಸಪ್ರಶ್ನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಸೋಲು&ಗೆಲುವು ನಿರೀಸದೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ ಎಂದರು.
ಶಿಕ ಜೊತೆಪ್ಪ ಕುಪ್ಪಾಳೆ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ನಿರ್ಣಾಯಕರಾಗಿ ಡಿ.ಎಸ್.ಕೋಳಿ, ಕಲ್ಮೇಶ ಕಾಂಬಳೆ, ಮುಖ್ಯಶಿಕ್ಷಕ ಬಿ.ಡಿ.ರುಕಡೆ ಕಾರ್ಯನಿರ್ವಹಿಸಿದರು. ಸಾಮಾನ್ಯ ಜ್ಞಾನ, ಥಟ್ ಅಂತ ಹೇಳಿ, ಸಿಎಲ್ಇ ಟುಡೇ, ಚಿತ್ರ ಗುರುತಿಸುವ ಸುತ್ತು, ವಿಷಯ ಆಧಾರಿತ ಮಾತು, ಸಂಗೀತ, ಮೂಕಾಭಿನಯ ಸೇರಿ ಹಲವು ಸ್ಪರ್ಧೆಗಳು ಜರುಗಿದವು. ತಾನಿಯಾ ಮಾಂಡವಕರ ತಂಡ ಪ್ರಥಮ, ಸಹನಾ ಕಾಮಗೌಡರ ತಂಡ ದ್ವೀತಿಯ ಹಾಗೂ ಸ್ನೇಹಾ ಪಾಟೀಲ ತಂಡ ತತೀಯ ಸ್ಥಾನ ಪಡೆದುಕೊಂಡಿತು. ಪ್ರೀತಿ ಕಾಂಬಳೆ ನಿರೂಪಿಸಿ, ಮಾನಸಾ ಕೆಂಗಾರೆ ವಂದಿಸಿದರು.