23ರಿಂದ ಮಡ್ಡಿ ಬೀರಸಿದ್ಧೇಶ್ವರ ಜಾತ್ರೆ

18BTG1
Published on

ಬೆಟಗೇರಿ: ಗ್ರಾಮದ ಬೆಟಗೇರಿ ತೋಟದ ಮಡ್ಡಿ ಬೀರಸಿದ್ಧೇಶ್ವರ ದೇವರ ಜಾತ್ರಾ ಮಹೋತ್ಸವ ಆ.23, 24ರಂದು ಜರುಗಲಿದೆ. ಆ.23ರಂದು ಬೆಳಗ್ಗೆ 6 ಗಂಟೆಗೆ ಮಡ್ಡಿ ಬೀರಸಿದ್ಧೇಶ್ವರ ದೇವರ ಗದ್ಗುಗೆಗೆ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮ, ಸಂಜೆ 6 ಗಂಟೆಗೆ ಪುರ ದೇವರ ಪಲ್ಲಕ್ಕಿ ಬರಮಾಡಿಕೊಳ್ಳುವುದು, ವಾಲಗ ಕೂಡುವುದು. ರಾತ್ರಿ 9ಗಂಟೆಗೆ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಜಾತ್ರೆಗೆ ಚಾಲನೆ ನೀಡುವರು. ಸುಣಧೋಳಿ ಅಭಿನವ ಶಿವಾನಂದ ಸ್ವಾಮೀಜಿ, ಕಡಕೋಳ ಅಭಿನವ ಸಿದ್ರಾಯ ಅಜ್ಜನವರು, ಮಮದಾಪುರ ಮೌನಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಆ.24ರಂದು ಬೆಳಗ್ಗೆ 8 ಗಂಟೆಗೆ ಶ್ರೀ ಬೀರಸಿದ್ಧೇಶ್ವರ ದೇವರ ಗದ್ಗುಗೆಗೆ ಅಭಿಷೇಕ, ಮಹಾಪೂಜೆ, ಬಳಿಕ ಪಲ್ಲಕ್ಕಿ ಉತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮ, ಮಹಾಪ್ರಸಾದ, ಮಧ್ಯಾಹ್ನ 12 ಗಂಟೆಗೆ ಓಪನ್​ ಟಗರಿನ ಕಾಳಗ, ಸಂಜೆ 6ಗಂಟೆಗೆ ಭಂಡಾರ ಒಡೆಯುವ ಕಾರ್ಯಕ್ರಮ ನಡೆದು ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net