19ರಿಂದ ಕುಂದರಗಿ ಅಡವಿಸಿದ್ದೇಶ್ವರ ಜಾತ್ರೆ

13Ankalagi5
Published on

ಅಂಕಲಗಿ: ಸಮೀಪದ ಕುಂದರಗಿ ಅಡವಿಸಿದ್ಧೇಶ್ವರ ಮಠದ ರಥೋತ್ಸವ ಜಾತ್ರೆ ಮತ್ತು ಕುಂದರನಾಡೋತ್ಸವ ಶ್ರೀಮಠದ ಅಧ್ಯ ಡಾ. ಅಮರಸಿದ್ಧೇಶ್ವರ ಸ್ವಾಮೀಜಿ ನೇತತ್ವದಲ್ಲಿ ಮಾ.19ರಿಂದ 23ರ ವರೆಗೆ ಜರುಗಲಿದೆ.

19ರಂದು ಬೆಳಗ್ಗೆ 8ಕ್ಕೆ ಧ್ವಜಾರೋಹಣ, ಕಳಸಾರೋಹಣ, 10ಕ್ಕೆ ಸಿದ್ಧರಾಮ ಸ್ವಾಮೀಜಿ ಸ್ಮರಣೋತ್ಸವ ಹಾಗೂ ಪಲ್ಲಕ್ಕಿ ಉತ್ಸವ, ಸಂಜೆ 4ಕ್ಕೆ ಟಗರಿನ ಕಾಳಗ, 20ರಂದು ಬೆಳಗ್ಗೆ 6.30ಕ್ಕೆ ವಟುಗಳಿಗೆ ಅಯ್ಯಾಚಾರ, 9.30ಕ್ಕೆ ಕುದುರೆ ಶರ್ಯತ್ತು, ಮಧ್ಯಾಹ್ನ 2.30ಕ್ಕೆ ಕುಸ್ತಿ, 21ರಂದು ಮಧ್ಯಾಹ್ನ 2.30ಕ್ಕೆ ಕುಸ್ತಿ, 7.30ಕ್ಕೆ ಉತ್ಸವ ಮೂರ್ತಿಗೆ ಸಂಗೀತ ಮಹಾಪೂಜೆ ಜರುಗಲಿದೆ.

22ರಂದು ಮಧ್ಯಾಹ್ನ 12.30ಕ್ಕೆ ಸಾಮೂಹಿಕ ವಿವಾಹ, ಸಂಜೆ 4ಕ್ಕೆ ಮಹಾರಥೋತ್ಸವ, ಸಂಜೆ 8 ಗಂಟೆಗೆ ರಸಮಂಜರಿ ಕಾರ್ಯಕ್ರಮ, 23ರಂದು ಶ್ರೀಗಳ ಆಶೀರ್ವಚನ, 10.30ಕ್ಕೆ ಜಾನುವಾರುಗಳ ಆಯ್ಕೆ, ಬಹುಮಾನ ವಿತರಣೆ, ಸಂಜೆ 5.30ಕ್ಕೆ ತೆಪ್ಪೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net