ಫ್ರೆಂಡ್​ಷಿಪ್​ ಡೇ: ಎರಡು ಸಿಕ್ಸರ್​ಗೆ ಕಾರಣವಾದ ಸ್ನೇಹ!

rakesh pattar
Published on
ರಕ್ತಸಂಬಂಧಕ್ಕೂ ಮಿಗಿಲಾದ ಸಂಬಂಧ ಸ್ನೇಹ. ಯಾವುದೋ ಒಂದು ಕ್ಷಣದಲ್ಲಿ ಬಂಧುಗಳಾರೂ ಹತ್ತಿರವಿರದಾಗ, ಸಹಾಯಹಸ್ತ ಚಾಚಿರುವ ನಿಮ್ಮ ಸ್ನೇಹಿತರ ಕುರಿತು ಮರೆಯಲಾಗದ ಘಟನೆಯನ್ನು ಹಂಚಿಕೊಳ್ಳುವಂತೆ ‘ವಿಜಯವಾಣಿ’ ನೀಡಿದ ಕರೆಗೆ ಸಾವಿರಾರು ಮಂದಿ ಸ್ಪಂದಿಸಿದ್ದಾರೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ...

ಆವಾಗ ನನಗೆ ಕ್ರಿಕೆಟ್ ಬಗ್ಗೆ ಬಹಳ ಗೊತ್ತಿರಲಿಲ್ಲ , ಅಷ್ಟಕ್ಕೂ ನನಗೆ ಕ್ರಿಕೆಟ್ ಆಡುವುದಕ್ಕೂ ಭಯವಾಗುತ್ತಿತ್ತು ಯಾಕೆಂದರೆ ಬಾಲು ಎಲ್ಲಿಯಾದರೂ ಬಡಿದು ಬಿಡುತ್ತದೆ ಅಂಥ. ಆಗ ನಾನು 7ನೇ ತರಗತಿ , ನನಗೆ ಒಬ್ಬ ಒಳ್ಳೆಯ ಸ್ನೇಹಿತ ಪರಿಚಯವಾದನು. ಅವನ ಹೆಸರು ಚಿರಂಜೀವಿ. ಇವನು ಕ್ರಿಕೆಟಿನಲ್ಲಿ ತುಂಬಾ ನಿಪುಣನಾಗಿದ್ದನು. ಅವನು ಕ್ರಿಕೆಟ್ ಬಗ್ಗೆ ಮತ್ತು ಆಡುವ ಶೈಲಿ ಬಗ್ಗೆ ಕೆಲವೊಂದು ಟಿಪ್ಸ್ ಹೇಳಿ ಹಾಗೆ ನನಗೆ ಧೈರ್ಯ ಕೂಡ ತುಂಬಿದನು. ಆವತ್ತು ಕ್ರಿಕೆಟ್ ಬಗ್ಗೆ ಸಂಪೂರ್ಣವಾಗಿ ತಿಳಿಯಿತು. ಶಾಲೆಯಲ್ಲಿ ಒಂದು ದಿನ ಕ್ರಿಕೆಟ್ ಮ್ಯಾಚ್ ಆಡುತ್ತಿದ್ದೆವು, ನಮ್ಮೆದುರಿನ ತಂಡದವರು ಟಾಸ್ ಗೆದ್ದು, ಬ್ಯಾಟಿಂಗ್ ಆಯ್ಕೆ ಮಾಡಿ, ಬ್ಯಾಟಿಂಗನ್ನು ಮುಗಿಸಿದರು. ನಂತರ ನಮ್ಮ ತಂಡದವರು ಬ್ಯಾಟಿಂಗ್​ಗೆ ಇಳಿದರು , ಮೊದಲೇ ಘಟಾನುಘಟಿಗಳ ವಿಕೆಟ್ ಹೋಗಿಬಿಟ್ಟಿತು. ನಾನೊಬ್ಬ ಕೊನೆಗೆ ಉಳಿದಿದ್ದೆ. ಹನ್ನೊಂದು ರನ್ ಬೇಕಾಗಿತ್ತು , ನನಗೆ ಏನಾಯಿತೋ ಏನೋ ನನ್ನ ಸ್ನೇಹಿತ ಹೇಳಿರುವಂತ ಧೈರ್ಯದ ಮಾತುಗಳು ಅತಿ ಪ್ರಭಾವ ಬೀರಿ. ಕಂಟಿನ್ಯೂ ಎರಡು ಸಿಕ್ಸರ್ ಹೊಡೆಯುವಂತೆ ಮಾಡಿಸಿತು . ನಾವು ಮ್ಯಾಚ್ ಗೆದ್ದೆವು. ಚಿರಂಜೀವಿ ಬಂದು ನನ್ನನ್ನು ಮೇಲಕ್ಕೆ ಎತ್ತಿಕೊಂಡನು. ಈ ಪ್ರಸಂಗವು ನನ್ನ ಬದುಕನ್ನೇ ಬದಲಿಸಿತು. ಇದು ನಮ್ಮ ಸ್ನೇಹಾನುಬಂಧ.

| ರಾಕೇಶ ವಿ. ಪತ್ತಾರ ಶಹಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net