ಸೌಹಾರ್ದತೆಯಲ್ಲಿ ಭಾರತ ಜಗತ್ತಿಗೆ ಮಾದರಿ

28-june-hdl--01
ಹೂವಿನಹಡಗಲಿಯಲ್ಲಿ ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್‌ಎಸ್‌ಎಫ್) ಹಾಗೂ ವಿವಿಧ ಮಠಗಳ ಮಠಾಧೀಶರು ಮತ್ತು ಇತರ ಧರ್ಮ ಗುರುಗಳ ನೇತೃತ್ವದಲ್ಲಿ ಸೌಹಾರ್ದ ನಡಿಗೆ ಕಾರ್ಯಕ್ರಮ ನಡೆಯಿತು. ರಾಜ್ಯ ಘಟಕದ ಅಧ್ಯಕ್ಷ ಸೋಫಿಯಾನ ಸಖಾಪಿ, ಶಾಖಾ ಗವಿಮಠದ ಹಿರಿಶಾಂತವೀರ ಸ್ವಾಮೀಜಿ, ಮಲ್ಲನಕೆರೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಚೌಕಿಮಠದ ಗಾಡಿತಾತ ಇತರರಿದ್ದರು.
Published on

ಹೂವಿನಹಡಗಲಿ: ನಮ್ಮ ದೇಶ ಉಳಿಯಬೇಕಾದರೆ ಸಂವಿಧಾನ, ಪ್ರೀತಿ, ಧರ್ಮಗಳು ಉಳಿಯಬೇಕು ಧರ್ಮಾಂಧತೆ ಅಳಿಯಬೇಕು ಎಂದು ಎಸ್‌ಎಸ್‌ಎಫ್ ರಾಜ್ಯ ಘಟಕದ ಅಧ್ಯಕ್ಷ ಸೋಫಿಯಾನ ಸಖಾಪಿ ಹೇಳಿದರು.

ಪಟ್ಟಣದ ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್‌ಎಸ್‌ಎಫ್), ವಿವಿಧ ಮಠಗಳ ಮಠಾಧೀಶರು ಮತ್ತು ಇತರ ಧರ್ಮ ಗುರುಗಳ ನೇತೃತ್ವದಲ್ಲಿ ಶುಕ್ರವಾರ ಸೌಹಾರ್ದ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸೌಹಾರ್ದತೆಯಿಂದ ಭಾರತ ಜಗತ್ತಿಗೆ ಮಾದರಿಯಾಗಿದೆ. ಕರ್ನಾಟಕವೆಂಬ ಸ್ವರ್ಗದಲ್ಲಿ ಬದುಕುವ ನಾವು ಜಾತಿವಾದ, ಕೋಮುವಾದದಿಂದ ಬದುಕನ್ನು ನರಕ ಮಾಡಿಕೊಳ್ಳಬಾರದು. ಸರ್ವ ಜನಾಂಗದ ಶಾಂತಿಯ ತೋಟ ಬರೀ ಭಾಷಣಕ್ಕೆ ಸೀಮಿತವಾಗಬಾರದು ಎಂದರು.

ಶಾಸ್ತ್ರಿ ವೃತ್ತದಿಂದ ಆರಂಭವಾದ ನಡಿಗೆ ಕಾರ್ಯಕ್ರಮ ಅಂಬೇಡ್ಕರ್ ವೃತ್ತದ ಮೂಲಕ ತೆರಳಿ ತೇರು ಹನುಮಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅಂತ್ಯಗೊಂಡಿತು.

ಶಾಖಾ ಗವಿಮಠದ ಹಿರಿಶಾಂತವೀರ ಸ್ವಾಮೀಜಿ, ಮಲ್ಲನಕೆರೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಚೌಕಿಮಠದ ಗಾಡಿತಾತ,

ನಾಗತಿಬಸಾಪುರದ ಗಿರಿರಾಜ ಹಾಲಸ್ವಾಮೀಜಿ, ಮಂಜುನಾಥಯ್ಯ ಹಾಲಸ್ವಾಮೀಜಿ, ಶ್ರೀರಾಮ ದೇವಸ್ಥಾನದ ಧರ್ಮದರ್ಶಿ ರಾಕೇಶಯ್ಯ, ಕಾರ್ಮೆಲ್ ಚರ್ಚ್‌ನ ಫಾ.ಡೆಂಜಿಲ್ ವೇಗಸ್, ಪ್ರಮುಖರಾದ ಕೋಡಿಹಳ್ಳಿ ಮುದುಕಪ್ಪ, ಡಾ.ಬಿ.ಟಿ.ಫಣಿರಾಜ, ಸಿ.ಚಾಂದಸಾಹೇಬ್, ಕೆ.ಗೌಸ್ ಮೊಹಿದ್ದೀನ್, ಡಿ.ಚಂದ್ರಶೇಖರ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net