

ಕಲಬುರಗಿ: ಬಸವೇಶ್ವರ ಬಡಾವಣೆಯ ಶ್ರೀ ಶರಣಬಸವೇಶ್ವರ ಉದ್ಯಾನದಲ್ಲಿ ಭಾನುವಾರ ಟೀಮ್ ಯಜ್ಞ ತಂಡದಿಂದ ಸ್ನೇಹಿತರ ದಿನವನ್ನು ಹೂವಿನ ಗಿಡ ನೆಟ್ಟು, ಸಸಿಗಳಿಗೆ ಬ್ಯಾಂಡ್ ಕಟ್ಟಿ ಆಚರಿಸಲಾಯಿತು.
ತಂಡದ ಮುಖ್ಯಸ್ಥೆ ಮಾಲಾ ದಣ್ಣೂರ ಮಾತನಾಡಿ, ಪ್ರಸ್ತುತ ಪರಿಸರ ಕಾಳಜಿ ಮರೆಯಾಗುತ್ತಿದ್ದು, ಮುಂದಿನ ತಲೆಮಾರಿನ ಭವಿಷ್ಯದ ದೃಷ್ಟಿಯಿಂದ ಮರ-ಗಿಡಗಳನ್ನು ಬೆಳೆಸಬೇಕಿದೆ. ಗಾಳಿ, ಮಳೆ ಜಾಗತಿಕ ತಾಪಮಾನ ನಿಯಂತ್ರಣದಲ್ಲಿ ಪರಿಸರ ಮಹತ್ವದ ಪಾತ್ರ ವಹಿಸುವುದರಿಂದ ಎಲ್ಲರೂ ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದರು.
ಶರಣಬಸವೇಶ್ವರ ಉದ್ಯಾನ ಅಭಿವೃದ್ಧಿ ಸಂಘದ ಅಧ್ಯಕ್ಷ ಭೀಮರಾವ ಅಕ್ಕೋಣಿ, ಕಾರ್ಯದರ್ಶಿ ಶ್ರೀಶೈಲ, ಪ್ರಮುಖರಾದ ನಾಗಣ್ಣ ಮಲಶೆಟ್ಟಿ, ರಾಜೇಂದ್ರ ಸೋನಿ, ಸುಮಾ ಪಪ್ಪಾ, ಮಾಲಿನಿ ಸ್ವಾಮಿ, ಭುವನೇಶ್ವರಿ ಹಳ್ಳಿಖೇಡ, ಪ್ರಸಾದ ಜೋಶಿ, ಜ್ಯೋತಿ ನಿಪ್ಪಾಣಿ, ಪ್ರಿಯಾ, ಜ್ಯೋತಿ ಕೋಟನೂರ, ಕಾರ್ತಿಕ ದಣ್ಣೂರ, ಶರಣು, ಶ್ರೇಯಾ ಕೋಟನೂರ, ಓಂ ಶ್ರೇಯಸ್ ಇತರರಿದ್ದರು.