

ಹುಬ್ಬಳ್ಳಿ: ಗುಟ್ಕಾ ವಿಚಾರಕ್ಕಾಗಿ ಗೆಳೆಯರಿಬ್ಬರು ಹೊಡೆದಾಡಿಕೊಂಡಿದ್ದು, ಕೊನೆಗೆ ಸ್ನೇಹಿತನೊಬ್ಬನ ಸಾವಿನೊಂದಿಗೆ ಜಗಳ ಅಂತ್ಯ ಆಗುವಂತಾಗಿದೆ. ಧಾರವಾಡ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.
ಹುಬ್ಬಳ್ಳಿಯ ಆನಂದ ನಗರದ ಬಾರ್ವೊಂದರಲ್ಲಿ ಈ ಗಲಾಟೆ ನಡೆದಿದ್ದು, ಗೆಳೆಯರಿಬ್ಬರ ಪೈಕಿ ಮೆಹಬೂಬ್ ಎಂಬಾತ ಸಾವಿಗೀಡಾಗಿದ್ದಾನೆ. ಸ್ನೇಹಿತರಾದ ಮೆಹಬೂಬ್ ಮತ್ತು ಮಹಮದ್ ಗೌಸ್ ಎಂಬವರು ಮದ್ಯ ಸೇವಿಸಲು ಜೊತೆಯಾಗಿ ಬಾರ್ಗೆ ತೆರಳಿದ್ದರು.
ಅಲ್ಲಿ ಗುಟ್ಕಾ ವಿಚಾರಕ್ಕಾಗಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಅದು ಜಗಳಕ್ಕೆ ತಿರುಗಿ ವಿಕೋಪಕ್ಕೆ ತೆರಳಿದ್ದು, ಮೆಹಬೂಬ್ ಕೊಲೆಗೀಡಾಗಿದ್ದಾನೆ. ಹಳೇ ಹುಬ್ಬಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವವನ್ನು ಕಿಮ್ಸ್ಗೆ ರವಾನಿಸಿದ್ದಾರೆ.