ಹಾಳು ಬಿದ್ದ ಸ್ವಾತಂತ್ರ್ಯ ಯೋಧರ ಸ್ಮಾರಕ ಭವನ‌ : ದಶಕವಾದರೂ ಕಟ್ಟಡಕ್ಕಿಲ್ಲ ವಿಮೋಚನೆ ; ಕ್ಯಾರೆ ಎನ್ನದ ಸರ್ಕಾರ

IMG-20230917-WA0001
Published on

ಬಾಬುರಾವ ಯಡ್ರಾಮಿ ಕಲಬುರಗಿ
ಕಲ್ಯಾಣ ಕರ್ನಾಟಕಕ್ಕೆ ನಿಜವಾದ ಸ್ವಾತಂತ್ರ್ಯ ಎಂದರೆ ಅದು ಸೆ.೧೭ ರಂದು ಹೈಕ ವಿಮೋಚನೆಗಾಗಿ ಅನೇಕರು ಹೋರಾಟ ನಡೆಸಿ ತ್ಯಾಗ ಬದಲಿದಾನವಾಗಿದ್ದಾರೆ. ಅವರ ಸ್ಮರಣೆಗಾಗಿ ಕಲಬುರಗಿಯಲ್ಲಿ ನಿರ್ಮಿಸಿದ ಸ್ವಾತಂತ್ರÈ ಯೋಧರ ಸ್ಮಾರಕ ಭವನ  ದಶಕವಾದರೂ ಪೂರ್ಣಗೊಳ್ಳದೆ ಅರೆಬರೆಯಾಗಿ ಈಗ ಹಾಳು ಬಿದ್ದು ಹೋಗಿದೆ.
ನಗರದ ಶಹಾಬಾದ ರಿಂಗ್‌ರೋಡ್‌ನಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ  ಸಿದ್ಧಯ್ಯ ಪುರಾಣಿಕ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಪರಿಸರದಲ್ಲಿ ಬೃಹತ್ ಪ್ರಮಾಣದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸ್ವಾತಂತ್ರÈಕ್ಕಾಗಿ ತ್ಯಾಗಬಲಿದಾನಗೊಂಡವರ ಸ್ಮರಣೆಗಾಗಿ ಭವನ ನಿರ್ಮಿಸುವುದಾಗಿ ಹಿಂದೆ ಸರ್ಕಾರ ಘೋಷಣೆ ಮಾಡಿತ್ತು. ಅದರಂತೆ ಅನುದಾನವನ್ನು ನೀಡಿ ರಂಗಾಯಣ ಬಳಿಯಲ್ಲಿ ಕಟ್ಟಡ ನಿರ್ಮಾಣ ಕೈಗೆತ್ತಿಕೊಂಡಿತು.
೨೦೧೨-೧೩ರಲ್ಲಿ ಕಾಮಗಾರಿಗೆ ಚಾಲನೆ ದೊರೆಯಿತು. ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಕಟ್ಟಡ ನಿರ್ಮಿಸಲು ಶುರುವಾಯಿತು. ಬೃಹತ್ ಕಟ್ಟಡ ತಲೆ ಎತ್ತಿತು. ಸಭಾಭವನ ಗೋಚರಿಸುತ್ತಿದೆ. ಆದರೆ, ಹೊರಗಡೆ ನೋಡಲು ದೊಡ್ಡ ಕಟ್ಟಡ ಆದರೆ, ಅದರಲ್ಲಿ ಏನು ಇಲ್ಲ. ಈಗ ಸಂಪೂರ್ಣ ಹಾಳಾಗಿ ಹೋಗಿದೆ.
ಕಟ್ಟಡ ಛಾವಣಿ ನಿರ್ಮಿಸುವ ಕೆಲಸ ಅಪೂರ್ಣಗೊಂಡಿದೆ. ಈಗದು ಮಳೆಗೆ ಕೊಳೆತು ಬೀಳುತ್ತಿದೆ. ಕಿಟಕಿ,ಬಾಗಿಲುಗಳು ಕಂಡವರ ಪಾಲಾಗಿವೆ. ಎಲ್ಲೆಂದರಲ್ಲಿ ಕಸ ತುಂಬಿಕೊAಡಿದೆ. ಒಳಗೆ ಮಳೆ ನೀರು ಸೋರಿ ನಿಂತುಕೊAಡು ಹುಲ್ಲು ಬೆಳೆದಿದೆ. ಸ್ವಾತಂತ್ರÈ ಯೋಧರ ಸ್ಮರಣೆಯ ಕೇಂದ್ರವಾಗಬೇಕಾಗಿದ್ದ ಕಟ್ಟಡ ಈಗ ಹಾಳಾಗಿದ್ದು ಯಾರು ಕ್ಯಾರೆ ಎನ್ನುತ್ತಿಲ್ಲ ಎಂಬುದು ಕಲ್ಯಾಣ ಕರ್ನಾಟಕ ಸ್ವಾತಂತ್ರÈ ಹೋರಾಟಗಾರರ ಹಿತರಕ್ಷಣಾ ಸಂಶೋಧನಾ ಕೇಂದ್ರ ಸಮಿತಿ ಅಧ್ಯಕ್ಷ ಗಿರೀಶಗೌಡ ಇನಾಮದಾರ ದೂರಿದರು.
ಕಕ ಉತ್ಸವಕ್ಕೆ ಮುಖ್ಯಮಂತ್ರಿಗಳು ಸೇರಿ ಹಲವರು ಬರುತ್ತಿದ್ದು ಅದರತ್ತ ಗಮನ ಹರಿಸಿ ಕಟ್ಟಡ ಪೂರ್ಣಗೊಳಿಸಿ ಸದ್ಬಳಕೆ ಮಾಡಿಕೊಳ್ಳಲು ಅಗತ್ಯವಿರುವ ಅನುದಾನ ನೀಡಿ ಕೆಲಸ ಆರಂಭಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net