ಉಚಿತ ಯೋಗ ತರಬೇತಿ, ಆರೋಗ್ಯ ಮಾಹಿತಿ ಶಿಬಿರ

gan (19)
Published on

ಕುಂದಾಪುರ: ಇಲ್ಲಿನ ಯೋಗಬಂಧು ಮತ್ತು ಹೋಟೆಲ್ ಪಾರಿಜಾತದ ಆಡಳಿತ ವರ್ಗ ಸಂಯುಕ್ತ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆ ಮತ್ತು ಉಚಿತ ಯೋಗ ತರಬೇತಿ ಹಾಗೂ ಆರೋಗ್ಯ ಮಾಹಿತಿ ಶಿಬಿರ ಕುಂದಾಪುರದಲ್ಲಿ ನಡೆಯಿತು.

ಮಲ್ಪೆಯ ಡಾ.ಮಹಮ್ಮದ್ ರಫೀಕ್ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ಸೋನಿ ಅಧ್ಯಕ್ಷತೆ ವಹಿಸಿದ್ದರು. ಪಾರಿಜಾತ ಹೋಟೆಲ್ ಮಾಲೀಕ ಗಣೇಶ ಭಟ್, ಆದರ್ಶ ಆಸ್ಪತ್ರೆಯ ಮುಖ್ಯಸ್ಥ ಡಾ.ಆದರ್ಶ ಹೆಬ್ಬಾರ್ ಉಪಸ್ಥಿತರಿದ್ದರು. ಯೋಗಗುರು ನಾಗೇಶ್ ಯೋಗ ತರಬೇತಿ ನೀಡಿದರು. ಭಾಸ್ಕರ, ಆದರ್ಶ, ಪ್ರಭಾಕರ, ಶ್ರೀಧರ, ನಿತ್ಯಾನಂದ, ಜಯರಾಮ ಶೆಟ್ಟಿ, ಶೀನ ಆಚಾರ್, ವಿಜಯಲಕ್ಷ್ಮೀ ಸಹಕರಿಸಿದರು. ಅನಿಲ್ ಚಾತ್ರ ಕಾರ್ಯಕ್ರಮ ನಿರೂಪಿಸಿದರು. ಜುಲೈ 12ರ ವರೆಗೆ ಪ್ರತಿದಿನ ಸಂಜೆ 5 ರಿಂದ 6.30ರವರೆಗೆ ಯೋಗ ಶಿಬಿರ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net