

ಗೋಣಿಕೊಪ್ಪ: ಕೈಕೇರಿ ಭಗವತಿ ರಿಕ್ರಿಯೇಷನ್ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಸ್ಥಳೀಯ ಅಂಗನವಾಡಿ ಮಕ್ಕಳಿಗೆ ಸೊಮವಾರ ಉಚಿತ ಸಮವಸ್ತ್ರ ವಿತರಿಸಲಾಯಿತು.
ಅಸೋಸಿಯೇಷನ್ ಅಧ್ಯಕ್ಷ ಜಮ್ಮಡ ಅರಸು ಅಪ್ಪಣ್ಣ ಮಾತನಾಡಿ, ಸ್ಥಳೀಯ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ಅಗತ್ಯ ವಸ್ತುಗಳನ್ನು ಕಳೆದ 25 ವರ್ಷಗಳಿಂದ ನೀಡುತ್ತಾ ಬಂದಿದ್ದು, ಮುಂದಿನ ದಿನಗಳಲ್ಲೂ ಸಮಾಜಮುಖಿ ಕಾರ್ಯಕ್ರಮಗಳ ಹಮ್ಮಿಕೊಳ್ಳಲಾಗುವುದು ಎಂದರು.
ಅಸೋಸಿಯೇಷನ್ ಉಪಾಧ್ಯಕ್ಷ ಕೆ.ಕೆ.ಬೋಜಪ್ಪ, ಗೌರವ ಕಾರ್ಯದರ್ಶಿ ಕೆ.ಪಿ.ಧರ್ಮಜ, ಖಜಾಂಚಿ ಸಿ.ಜಿ.ಸುಬ್ರಹ್ಮಣ್ಯ, ಜಂಟಿ ಕಾರ್ಯದರ್ಶಿ ಜೆ.ಕೆ.ನಾಣಯ್ಯ, ನಿರ್ದೇಶಕ ಕೆ.ಜಿ.ಕರುಂಬಯ್ಯ, ಬಿ.ಎ.ಚಂಗಪ್ಪ, ಹಾತೂರು ಗ್ರಾ.ಪಂ. ಸದಸ್ಯ ಜಮ್ಮಡ ಟಿ.ಭೀಮಯ್ಯ(ಲವ) ಇತರರು ಇದ್ದರು.