

ಕೊಕ್ಕರ್ಣೆ: ಬೈದೆಬೆಟ್ಟು ಶ್ರೀರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಸಮವಸ್ತ್ರ, ವಿದ್ಯಾರ್ಥಿವೇತನ ವಿತರಣೆ ಇತ್ತೀಚೆಗೆ ನೆರವೇರಿತು.
38ನೇ ಕಳ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಕುಮಾರ್, ಮುದ್ದೂರು ಡಿಸಿಸಿ ಬ್ಯಾಂಕ್‌ನ ಸುಮನಾ ಶಶಿಧರ ಹೆಬ್ಬಾರಬೆಟ್ಟು ಸಮವಸ್ತ್ರ, ಸಿಎ ಮನೋಹರ ಶೆಟ್ಟಿ ನೋಟ್ ಪುಸ್ತಕ, ರಾಕೇಶ್ ಜೋಗಿ ಬ್ಯಾಗ್, ಹರೀಶ್ ಜೋಗಿ ನೀರಿನ ಬಾಟಲ್, ಪ್ರಜ್ವತ್ ಕುಮಾರ್ ಬ್ರಹ್ಮಾವರ ಶೂ ವಿತರಿಸಿದರು.
ಕೆಂಜೂರು ಶಾಲಾ ಸಂಚಾಲಕ ಶಶಿಧರ್ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ಸದಾಶಿವ ಪೂಜಾರಿ, ಕೆಂಜೂರು ಪಂಚಾಯಿತಿ ಸದಸ್ಯ ದಿನೇಶ್ ಶೆಟ್ಟಿ, ಕೊಕ್ಕರ್ಣೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾಧವ ಪೈ ಬೈದೆಬೆಟ್ಟು, ಸಂಚಾಲಕಿ ವಿದ್ಯಾ ಎಸ್.ಶೆಟ್ಟಿ, ಸಂತೋಷ್ ಕುಲಾಲ್ ಕಲ್ಗೋಳಿ, ಸುರೇಶ್, ತೇಜಪ್ಪ ಶೆಟ್ಟಿ ಬಲ್ಲೆಗುಡ್ಡೆ, ನಿತಿನ್ ಭಾಸ್ಕರ್ ಆಚಾರ್ಯ ಕಲ್ಗೋಳಿ, ಮುಖ್ಯ ಶಿಕ್ಷಕ ಕೆ.ಶಾಂತಾರಾಜ ಶೆಟ್ಟಿ, ಶಿಕ್ಷಕಿಯರಾದ ಶ್ರೀಕಲಾ, ಸುನಂದಾ, ಸಂಗೀತಾ, ರೇಣುಕಾ, ಪಾಲಕರು, ಹಳೇ ವಿದ್ಯಾರ್ಥಿಗಳು, ಇತರರು ಉಪಸ್ಥಿತರಿದ್ದರು.