

ಬೈಲಹೊಂಗಲ: ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಣಕ್ಕೆ ಉತ್ತೇಜನ ನೀಡಲು ಡಾ.ವಿ.ಐ.ಪಾಟೀಲ ೌಂಡೇಷನ್ ಹಾಗೂ ಧಾರವಾಡದ ಸಂಕಲ್ಪ ಅಕಾಡೆಮಿ ಸಹಯೋಗದೊಂದಿಗೆ ಪಟ್ಟಣದ ಗಣಾಚಾರಿ ಮಹಾವಿದ್ಯಾಲಯದಲ್ಲಿ ಜು.20ರಂದು ಬೆಳಗ್ಗೆ 9ಕ್ಕೆ ಸ್ಪರ್ಧಾತ್ಮಕ ಪರೀೆಗಳಿಗೆ ಉಚಿತ ತರಬೇತಿಗಾಗಿ ಪ್ರವೇಶ ಪರೀೆ ನಡೆಯಲಿದ್ದು, ಇದರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಸೇರಿ ಗಣ್ಯರು ಪಾಲ್ಗೊಳ್ಳುವರು. ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್, ಪಿಎಸೈ, ಪಿಸಿ, ಬ್ಯಾಂಕ್ ಪರೀೆ, ಎ್ಡಿಎ, ಎಸ್ಡಿಎ, ಪಿಡಿಒ ಮುಂತಾದ ಸ್ಪರ್ಧಾತ್ಮಕ ಪರೀೆಗಳಿಗೆ ಜು.28ರಿಂದ ವಸತಿ ಸಹಿತ 4 ತಿಂಗಳು ಉಚಿತ ತರಬೇತಿ ನಡೆಯಲಿದೆ. ಪರೀೆಯಲ್ಲಿ ಪಾಸಾದ 100 ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯನ್ನು ಜು.23ರಂದು ಪ್ರಕಟಿಸಲಾಗುವುದು.