ಭ್ರಷ್ಟ ಕಾಂಗ್ರೆಸ್‌ನಿಂದ ಕ್ಷೇತ್ರವನ್ನು ಮುಕ್ತಗೊಳಿಸಿ

FotoJet (2)
Published on

ಕಾರ್ಯಕರ್ತರಿಗೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಕರೆ

ಬಾಗೇಪಲ್ಲಿ : ಭ್ರಷ್ಟ ಕಾಂಗ್ರೆಸ್‌ನಿಂದ ಬಾಗೇಪಲ್ಲಿ ಕ್ಷೇತ್ರವನ್ನು ಮುಕ್ತಗೊಳಿಸಿ ಅಭಿವೃದ್ಧಿಯತ್ತ ಕೊಂಡೊಯ್ಯುವ ಬಿಜೆಪಿ ಅಭ್ಯರ್ಥಿ ಶಾಸಕರಾಗಬೇಕಾಗಿದ್ದು, ಅದಕ್ಕಾಗಿ 50 ಸಾವಿರ ಸದಸ್ಯತ್ವದ ಗುರಿ ಮುಟ್ಟಬೇಕಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಕಾರ್ಯಕರ್ತರಿಗೆ ಕರೆ ನೀಡಿದರು.
ಪಟ್ಟಣದ ಹೊರವಲಯದ ಟಿ.ಬಿ.ಕ್ರಾಸ್‌ನಲ್ಲಿರುವ ಗೃಹ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಬಾಗೇಪಲ್ಲಿ ಮತ್ತು ಗುಡಿಬಂಡೆ ಮಂಡಲ ಸದಸ್ಯತ್ವ ಅಭಿಯಾನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ, ಹಗರಣಗಳು ತಾಂಡವವಾಡುತ್ತಿದೆ. ಬಡವರಿಗೆ ಸಿಗಬೇಕಾಗಿರುವ ಸೌಲಭ್ಯಗಳು, ಅನುದಾನ ಪರೋಕ್ಷವಾಗಿ ಕಾಂಗ್ರೆಸ್ ಮುಖಂಡರ ಜೇಬು ಸೇರುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಹಗರಣದಲ್ಲಿ ಭಾಗಿಯಾಗಿ ತನಿಖೆ ಎದುರಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಬಡವರ ಭೂಮಿಯನ್ನು ಕಸಿದುಕೊಂಡಿರುವ, ಅಕ್ರಮವಾಗಿ ಸರ್ಕಾರಿ ಭೂಮಿ ಪಡೆದಿರುವ ಭೂಹಗರಣಗಳ ಬಗ್ಗೆ ಅತೀ ಶೀಘ್ರದಲ್ಲೇ ತನಿಖೆ ನಡೆಯಲಿದೆ. ಶಾಸಕರ ಭ್ರಷ್ಟಾಚಾರಗಳು ಬೆಳಕಿಗೆ ಬಂದು ಅಸಲಿ ಮುಖವಾಡ ಕ್ಷೇತ್ರದ ಜನತೆಗೆ ತಿಳಿಯಲಿದೆ. ಆದ್ದರಿಂದ ಬಾಗೇಪಲ್ಲಿಯಲ್ಲಿ ಕಾಂಗ್ರೆಸ್ ಶಾಸಕರ ಭ್ರಷ್ಟ ಆಡಳಿತಕ್ಕೆ ಅಂತ್ಯ ಕಾಣಿಸಿ ಭ್ರಷ್ಟಾಚಾರ ಮುಕ್ತ ಬಾಗೇಪಲ್ಲಿಗಾಗಿ ಬಿಜೆಪಿ ಕಾರ್ಯಕರ್ತರ ಪಡೆ ಸಿದ್ಧವಾಗಬೇಕು ಎಂದರು.

ಕ್ಷೇತ್ರದ ಅಭ್ಯರ್ಥಿ ಅಯ್ಕೆ ವಿಚಾರದಲ್ಲಿ ಬಿಜೆಪಿ ಯಾವುದೇ ಮೈತ್ರಿ ಒಪ್ಪಂದ ಮಾಡಿಕೊಂಡಿಲ್ಲ. ಬಿಜೆಪಿ ಯಾವ ಅಭ್ಯರ್ಥಿಯನ್ನು ಅಂತಿಮ ಮಾಡಿಲ್ಲ. ಕಾರ್ಯಕರ್ತರು ಯಾವುದೇ ಕಾರಣಕ್ಕೂ ಗೊಂದಲಕ್ಕೆ ಗುರಿಯಾಗದೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿ ಮಾಡಿಸಿ ಪಕ್ಷ ಕಟ್ಟುವ ಕೆಲಸವನ್ನು ಮತ್ತಷ್ಟು ಚುರುಕುಗೊಳಿಸಿದರೆ ಗೆಲುವು ನಮ್ಮದೇ. 2023ರ ವಿಧಾನಸಭೆಯಲ್ಲಿ 63 ಸಾವಿರ, 2024ರ ಲೋಕಸಭೆಯಲ್ಲಿ 78 ಸಾವಿರ ಮತಗಳನ್ನು ಪಡೆದುಕೊಂಡಿರುವ ಬಿಜೆಪಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 1 ಲಕ್ಷ ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಖಚಿತ ಎಂದರು.

ಅಧಿಕಾರಿಗಳಿಗೆ ಎಚ್ಚರಿಕೆ
ಬಾಗೇಪಲ್ಲಿ, ಗುಡಿಬಂಡೆ ಮತ್ತು ಚೇಳೂರು ತಾಲೂಕು ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಸರ್ಕಾರಿ ಅಧಿಕಾರಿಗಳು ಈಗಾಗಲೇ ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಹಾಕಿ ವಿನಾಕಾರಣ ತೊಂದರೆ ನೀಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಅಧಿಕಾರಿಗಳು ಸ್ವಾಮಿ ನಿಷ್ಠೆ ಚಾಳಿಯನ್ನು ಬಿಡದಿದ್ದರೆ ಕಚೇರಿಗಳ ಎದುರು ಹೋರಾಟ ನಡೆಸಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಎಚ್ಚರಿಸಿದರು.

ದಲಿತರಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ
ದಲಿತ ಮುಖಂಡ ಚಿನ್ನಪೂಜಪ್ಪ ಮಾತನಾಡಿ, ಕೇಂದ್ರದಲ್ಲಿ ಅಟಲ್‌ಬಿಹಾರಿ ವಾಜಪೇಯಿ ಸರ್ಕಾರವಿದ್ದಾಗ ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಭಾರತರತ್ನ ಪ್ರಶಸ್ತಿ ಕೊಟ್ಟು ಗೌರವಿಸಿದ್ದಾರೆ. ಅಂಬೇಡ್ಕರ್ ೆಟೋವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರದ 60 ವರ್ಷಗಳ ಅಡಳಿತದಲ್ಲಿ ದಲಿತರಿಗೆ ಕೊಡುಗೆ ಶೂನ್ಯವಾಗಿದೆ. ಅಂಬೇಡ್ಕರ್ ಮೃತಪಟ್ಟ ಸಮಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಅವರ ಶವಸಂಸ್ಕಾರಕ್ಕೂ ದೆಹಲಿಯಲ್ಲಿ ಅವಕಾಶ ಕಲ್ಪಿಸದೆ ಅವಮಾನ ಮಾಡಿದೆ. ಬಿಜೆಪಿ ಸದಸ್ಯತ್ವ ಪಡೆಯಬೇಡಿ ಎಂಬ ಕಾಂಗ್ರೆಸ್ ಪಕ್ಷದವರ ಕರೆಗೆ ದಲಿತರು ಕಿವಿಗೊಡದೆ ಅಂಬೇಡ್ಕರ್‌ಗೆ ಭಾರತರತ್ನ ನೀಡಿ ಗೌರವಿಸಿರುವ ಬಿಜೆಪಿ ಸದಸ್ಯತ್ವವನ್ನು ಪಡೆದುಕೊಳ್ಳಿ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷರಾದ ಆರ್.ಪ್ರತಾಪ್, ಗುಡಿಬಂಡೆ ಗಂಗಿರೆಡ್ಡಿ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ವೆಂಕಟೇಶ್, ಮುಖಂಡರಾದ ಎಂ.ಬಿ.ಲಕ್ಷ್ಮೀನರಸಿಂಹಯ್ಯ, ತಟ್ಟಪಲ್ಲಿ ಮದ್ದಿರೆಡ್ಡಿ, ಪಿ.ಎಸ್.ವೆಂಕಟರೆಡ್ಡಿ, ಕೊಂಡಿರೆಡ್ಡಿಪಲ್ಲಿ ಮಂಜುನಾಥ, ವೆಂಕಟೇಶ್, ಪ್ರತಾಪ್‌ರೆಡ್ಡಿ, ರಂಗಾರೆಡ್ಡಿ, ಗಂಗರಾಜು, ವಕೀಲ ಮಂಜುನಾಥ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net