

ಕೊಕ್ಕಡ: ಕನ್ಯಾಡಿ ಸೇವಾಭಾರತಿ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲ ವೈಕುಂಠಪುರ ಮತ್ತು ಶಿಶಿಲ ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ ಒಂದು ತಿಂಗಳ ಉಚಿತ ಟೈಲರಿಂಗ್ ತರಬೇತಿ ಶಿಬಿರ ಶಿಶಿಲ ವೈಕುಂಠಪುರ ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.
ಶಿಶಿಲ ಟೈಲರಿಂಗ್ ತರಬೇತುದಾರೆ ವಿನಯ ಶೆಂಡ್ಯೆ ಬಂಡಿಹೊಳೆ ಉದ್ಘಾಟಿಸಿ ತರಬೇತಿಗೆ ಶುಭ ಹಾರೈಸಿದರು. ಸೇವಾಭಾರತಿ ಕನ್ಯಾಡಿಯ ಟ್ರಸ್ಟಿ ಕೃಷ್ಣಪ್ಪ ಗುಡಿಗಾರ್, ಸ್ವಉದ್ಯೋಗದಿಂದ ಮಹಿಳೆಯರು ತಮ್ಮ ಕಾಲ ಮೇಲೆ ನಿಂತು ಸ್ವಾವಲಂಬಿಯಾಗಿ ಬದುಕು ನಡೆಸಬೇಕೆಂದು ಹೇಳಿದರು.
ಮುಖ್ಯ ಅತಿಥಿ ಶಿಶಿಲ ವೈಕುಂಠಪುರ ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲದ ಅಧ್ಯಕ್ಷ ಹರೀಶ್ ಕೊಳಂಬೆ ಉಪಸ್ಥಿತರಿದ್ದರು. 19 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ಯಶೋದಾ ಸ್ವಾಗತಿಸಿದರು. ಸೇವಾಭಾರತಿಯ ಡಾಕ್ಯುಮೆಂಟೇಶನ್ ಮಾನಿಟರಿಂಗ್ ಮತ್ತು ಇವಲ್ಯೂವೇಟಿಂಗ್ ಕೋರ್ಡಿನೇಟರ್ ಸುಮಾ ಕಾರ್ಯಕ್ರಮ ನಿರೂಪಿಸಿದರು. ಸೇವಾಭಾರತಿಯ ಸ್ವಯಂಸೇವಕ ಚಂದನ್ ಗುಡಿಗಾರ್ ವಂದಿಸಿದರು.