ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ಚಾಲನೆ

Published on

ಕಾಸರಗೋಡು: ಉಪಜಿಲ್ಲಾ ಶಾಲಾ ಕಲೋತ್ಸವ ಗುರುವಾರ ಆಫ್‌ಸ್ಟೇಜ್ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡಿದ್ದು, ಅ.30 ರವರೆಗೆ ತೆಕ್ಕಿಲ್‌ಪರಂಬ ಜಿಯುಪಿ ಶಾಲೆಯಲ್ಲಿ ನಡೆಯಲಿದೆ. 24 ರಂದು ಅರೇಬಿಕ್ ಆಫ್ ಸ್ಟೇಜ್ ಸ್ಪರ್ಧೆ ಜರುಗಿತು. 25 ಮತ್ತು 26 ರಂದು ಸಾಮಾನ್ಯ ಆಫ್‌ಸ್ಟೇಜ್ ಸ್ಪರ್ಧೆಗಳು ನಡೆಯಲಿವೆ ಎಂದು ಸ್ವಾಗತ ಸಮಿತಿ ಅಧ್ಯಕ್ಷೆ ಸುಫೈಜಾ ಅಬೂಬಕರ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.

26ರಂದು ಪೊಯಿನಾಚಿ ಮತ್ತು ಚಟ್ಟಂಚಾಲ್‌ನಲ್ಲಿ ನಡೆಯುವ ಪ್ಲ್ಯಾಷ್‌ಮೋಬನ್ನು ಮೇಲ್‌ಪರಂಬ ಠಾಣೆ ಸಿ.ಐ ಸಂತೋಷ್ ಕುಮಾರ್ ಉದ್ಘಾಟಿಸಲಿದ್ದಾರೆ.

ಎಲ್‌ಪಿ ವಿಭಾಗದ 23, ಯುಪಿ ವಿಭಾಗದ 38, ಪ್ರೌಢಶಾಲಾ ವಿಭಾಗದ 104, ಹೈಯರ್ ಸೆಕೆಂಡರಿಯ 110 ಯುಪಿ (ಸಂಸ್ಕೃತ) 19, ಎಚ್ ಎಸ್ (ಸಂಸ್ಕೃತ) 19 ಎಲ್‌ಪಿ ಅರೇಬಿಕ್ 9, ಯುಪಿ ಅರೇಬಿಕ್ 13, ಎಚ್‌ಎಸ್ ಅರೇಬಿಕ್ 19, ಹೀಗೆ ಒಟ್ಟು 354 ವಿಷಯಗಳಲ್ಲಿ 5454 ವಿದ್ಯಾರ್ಥಿಗಳು ಕಲೋತ್ಸವದಲ್ಲಿ ಭಾಗವಹಿಸಲಿದ್ದಾರೆ.

30ರಂದು ನಡೆಯುವ ಸಮಾರೋಪ ಸಮಾರಂಭವನ್ನು ಉದುಮ ಶಾಸಕ ಸಿ. ಎಚ್ ಕುಂಞಂಬು ಉದ್ಘಾಟಿಸುವರು. ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಬಹುಮಾನ ವಿತರಿಸುವರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಚಲನಚಿತ್ರ ಮತ್ತು ಕಿರುತೆರೆ ನಟಿ ಉನ್ನಿರಾಜ್ ಚೆರುವತ್ತೂರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಇಬ್ರಾಹಿಂ ಮನ್ಸೂರ್ ಕುರಿಕಲ್, ಕೃಷ್ಣನ್ ಚಟ್ಟಂಚಾಲ್, ಶಾಲಾ ಮುಖ್ಯಶಿಕ್ಷಕ ಶ್ರೀವತ್ಸನ್, ರಾಧಾಕೃಷ್ಣನ್ ಕಮಲಂ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪಿ.ಸಿ. ನಾಸೀರ್, ಪ್ರಚಾರ ಸಮಿತಿ ಅಧ್ಯಕ್ಷ ಶ್ರೀಜಿತ್ ಎನ್.ಸಿ, ಸಂಚಾಲಕ ಅಬ್ದುಲ್‌ರಹ್ಮಾನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net