ಇವುಗಳಲ್ಲಿ ಯಾವುದನ್ನಾದ್ರೂ ತೋರಿಸಿದ್ರೆ ನಾಳೆಯಿಂದ ಉಚಿತ ಊಟ-ತಿಂಡಿ!; ಮೇ 12ರಿಂದ 24ರವರೆಗೆ ಇಂದಿರಾ ಕ್ಯಾಂಟೀನ್ ಓಪನ್

Untitled-1
Published on

ಬೆಂಗಳೂರು: ಲಾಕ್​ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ, ಖರ್ಚಿಗೆ ಕಾಸೂ ಇಲ್ಲದೆ ಚಿಂತೆಯಲ್ಲಿರುವ ಬಡವರಿಗೆ ನಾಳೆಯಿಂದ ಉಚಿತವಾಗಿಯೇ ಊಟ ಸಿಗಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಹೊರತುಪಡಿಸಿ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್​ಗಳಲ್ಲಿ ಉಚಿತ ಊಟಕ್ಕೆ ವ್ಯವಸ್ಥೆ ಮಾಡಿರುವ ಸರ್ಕಾರ, ಇದೀಗ ರಾಜಧಾನಿಯಲ್ಲೂ ಈ ಸೇವೆ ನೀಡಲು ಮುಂದಾಗಲಿದೆ.

ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್​ಗಳಲ್ಲಿ ಉಚಿತವಾಗಿ ಊಟ ನೀಡಲಾಗುವುದು ಎಂದು ಬೆಳಗ್ಗೆಯಷ್ಟೇ ಹೇಳಲಾಗಿತ್ತು. ಇದೀಗ ಆ ಸೇವೆ ಬೆಂಗಳೂರಿಗೂ ವಿಸ್ತರಣೆ ಆಗಿರುವ ಕುರಿತು ಆದೇಶ ಹೊರಬಿದ್ದಿದೆ. ನಾಳೆಯಿಂದ ಬೆಂಗಳೂರಿನಲ್ಲಿರುವ ಇಂದಿರಾ ಕ್ಯಾಂಟೀನ್​ಗಳಲ್ಲೂ ಉಚಿತವಾಗಿ ಊಟ-ತಿಂಡಿ ಸಿಗಲಿದೆ.

ಮೇ 12ರಿಂದ 24ರ ವರೆಗೂ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟ ಉಚಿತವಾಗಿ ಲಭಿಸಲಿದೆ. ಅಗತ್ಯ ಇರುವವರು ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಅಥವಾ ಕಾರ್ಮಿಕ ಇಲಾಖೆಯ ಗುರುತಿನ ಚೀಟಿ ನೀಡಿ ಆಹಾರದ ಪೊಟ್ಟಣ ಉಚಿತವಾಗಿ ಪಡೆಯಬಹುದು. ಈ ವೇಳೆ ಕೋವಿಡ್ ಮಾರ್ಗಸೂಚಿಗಳನ್ನು ಅಗತ್ಯವಾಗಿ ಪಾಲಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net