ಹೊಲಿಗೆ ತರಬೇತಿ ಉಚಿತ ಶಿಬಿರ

shibira
ಗಂಗೊಳ್ಳಿ ರೋಟರಿ ಕ್ಲಬ್ ಆಯೋಸಿದ ಹೊಲಿಗೆ ತರಬೇತಿ ಉಚಿತ ಶಿಬಿರ ಉದ್ಘಾಟನೆ ನೆರವೇರಿತು.
Published on

ಗಂಗೊಳ್ಳಿ: ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಉಚಿತ ಶಿಬಿರ ಶುಕ್ರವಾರ ನಡೆಯಿತು.

ಗಂಗೊಳ್ಳಿಯ ಎಸ್‌ವಿ ಹಿರಿಯ ಪ್ರಾಥಮಿಕ ಶಾಲೆಯ ಟಿ.ವಿಮಲಾ ವಿ.ಪೈ. ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ರೋಟರಿ ಜಿಲ್ಲೆ 3182ರ ವಲಯ-2ರ ಅಸಿಸ್ಟೆಂಟ್ ಗವರ್ನರ್ ಮಮತಾ ಆರ್.ಶೆಟ್ಟಿ ಉದ್ಘಾಟಿಸಿದರು.

ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷೆ ಚಂದ್ರಕಲಾ ಎಸ್.ತಂಡೇಲ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ಶಿಕ್ಷಕರಾದ ಶಾಂತಿ ಖಾರ್ವಿ, ಮುಖ್ಯ ಶಿಕ್ಷಕ ಜಿ.ವಿಶ್ವನಾಥ್ ಭಟ್, ಕ್ಲಬ್‌ನ ಖಜಾಂಚಿ ಜನಾರ್ದನ್ ಪೂಜಾರಿ ಪೆರಾಜೆ, ರೋಟರಿ ಸದಸ್ಯರು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ರೋಟರಿ ಸದಸ್ಯೆ ಫಿಲೋಮಿನಾ ಫರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣ ಪೂಜಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net