ನಾಳೆ ಉಚಿತ ವೈದ್ಯಕೀಯ ಶಿಬಿರ

Doctor
Published on

ಬೈಲುಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಟಿಡಿಎಲ್ 5ನೇ ಕ್ಯಾಂಪಿನ ಕಗ್ಯುಡ್ವ ಮುನೋಸ್ಟಿಕ್ ಇನ್‌ಸ್ಟಿಟ್ಯೂಟ್ ಆವರಣದಲ್ಲಿ ಮೇ 25ರಂದು ಬೆಳಗ್ಗೆ 9ರಿಂದ 4 ಗಂಟೆ ತನಕ ಮೈಸೂರಿನ ಎನ್‌ಜೆ ಆಸ್ಪತ್ರೆ ವತಿಯಿಂದ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟರಾಲಜಿ ಹಾಗೂ ಡ್ರಿಕುಂಗ್, ಚಾರಿಟಬಲ್ ಸೊಸೈಟಿ ನೇತೃತ್ವದಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿದೆ.

ಬೈಲುಕುಪ್ಪೆ ಸುತ್ತಮುತ್ತಲಿನ ಸಾರ್ವಜನಿಕರು ಹಾಗೂ ಟಿಬೆಟಿಯನ್ನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಡಾ.ಸಿಂಧುಲಕ್ಷ್ಮೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net