100 ಜೋಡಿಗಳ ಉಚಿತ ಸಾಮೂಹಿಕ ವಿವಾಹ : ಉಪ್ಪಿನಂಗಡಿಯಲ್ಲಿ ಅರುಣ್‌ಕುಮಾರ್ ಪುತ್ತಿಲ ಹೇಳಿಕೆ

New Project (17)
Published on

ಉಪ್ಪಿನಂಗಡಿ: ರಾಷ್ಟ್ರೀಯ ಸ್ವಯಂಸೇವಕ ಸಂದ 100ನೇ ವರ್ಷಾಚರಣೆ ಅಂಗವಾಗಿ ಈ ಬಾರಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ 100 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲಾಗುವುದು ಎಂದು ಟ್ರಸ್ಟ್ ಪ್ರವರ್ತಕ ಅರುಣ್‌ಕುಮಾರ್ ಪುತ್ತಿಲ ಹೇಳಿದರು.

ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಸಾರ್ವಜನಿಕ ಶ್ರೀ ಶನೈಶ್ವರ ಪೂಜಾ ಕಾರ್ಯಕ್ರಮ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಶ್ರೀರಾಮ ಭಟ್ ಪಾತಾಳ ಅಧ್ಯಕ್ಷತೆ ವಹಿಸಿದ್ದರು. ಡಾಣ ಬಿಲ್ಲಂಪದವು ಮಹಾಲಿಂಗ ಭಟ್ ಉಪನ್ಯಾಸ ನೀಡಿದರು. ಉದ್ಯಮಿ ಹೇರಂಭ ಶಾಸ್ತ್ರೀ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಶಶಿಧರ ಎಂ., ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ಅಧ್ಯಕ್ಷ ಸುನೀಲ್ ದಡ್ಡು, ಪುತ್ತಿಲ ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ ಪಡ್ಪು, ಉದ್ಯಮಿ ನಟೇಶ್ ಪೂಜಾರಿ ಮಾತನಾಡಿದರು. ಟ್ರಸ್ಟ್ ಗೌರವಾಧ್ಯಕ್ಷ ಡಿ.ಚಂದಪ್ಪ ಮೂಲ್ಯ, ಜಯಂತ ಪೊರೋಳಿ ಉಪಸ್ಥಿತರಿದ್ದರು. ಹರೀಶ್ ಉಪಾಧ್ಯಾಯ ಪೌರೋಹಿತ್ಯದಲ್ಲಿ ಶನಿ ಪೂಜೆ ನೆರವೇರಿತು. ಪ್ರಮುಖರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಧನ್ಯ ಕುಮಾರ್ ರೈ, ಕರುಣಾಕರ ಸುವರ್ಣ, ಸುಜಾತ ಕೃಷ್ಣ ಆಚಾರ್ಯ, ಹರೀಶ್ ನಾಯಕ್ ನಟ್ಟಿಬೈಲ್, ಕೆ.ಜಗದೀಶ್ ಶೆಟ್ಟಿ, ಶರತ್ ಕೋಟೆ, ರವೀಶ್ ಎಚ್.ಟಿ., ಕೆ.ಸುಧಾಕರ ಶೆಟ್ಟಿ, ಪ್ರಶಾಂತ್ ಶಿವಾಜಿನಗರ, ಚಿದಾನಂದ ಪರಿಯಡ್ಕ, ನವೀನ್ ಬವ್ಡಾಡಿ, ಕುಶಾಲಪ್ಪ, ರವೀಂದ್ರ ರೈ, ರಂಜಿತ್ ಅಡೆಕ್ಕಲ್, ಗಿರೀಶ್ ಹೆಗ್ಡೆ, ರಮೇಶ್ ಭಂಡಾರಿ, ಸಂತೋಷ್, ಹರಿಕೃಷ್ಣ ಬಜತ್ತೂರು ಲೋಕೇಶ್ ಬೆತ್ತೋಡಿ, ರಾಜೇಶ್ ಶಾಂತಿನಗರ ಮೊದಲಾದವರು ಭಾಗವಹಿಸಿದ್ದರು.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮುಸ್ಲಿಂ ತುಷ್ಟೀಕರಣ ನೀತಿ ಅತಿಯಾಗಿ ಅನುಸರಿಸುತ್ತಿದ್ದು, ಪೊಲೀಸ್ ಬಲ ಪ್ರಯೋಗಿಸಿ ಹಿಂದು ದಮನ ಕಾರ್ಯಕ್ಕೆ ಮುಂದಾಗಿದೆ ಅರುಣ್‌ಕುಮಾರ್ ಪುತ್ತಿಲ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪ್ರವರ್ತಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net