ಸಂಕಷ್ಟ ಹೋಗಲಾಡಿಸಲು ಭಜನೆ ಸಾಧನ: ಶರತ್ ಕೃಷ್ಣ ಪಡುವೆಟ್ನಾಯ ಅಭಿಪ್ರಾಯ

New Project (4)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಧರ್ಮ ಅಥವಾ ಸಮಾಜದಲ್ಲಿ ಬಂದ ಸಂಕಷ್ಟಗಳನ್ನು ಹೋಗಲಾಡಿಸಲು ಭಜನೆ ಸಾಧನ ಎಂದು ಉಜಿರೆ ಜನಾರ್ದನ ದೇವಸ್ಥಾನ ಆನುವಂಶಿಕ ಆಡಳಿತ ಮೊಕೇಸರ ಶರತ್‌ಕೃಷ್ಣ ಪಡುವೆಟ್ನಾಯ ಹೇಳಿದರು.

ಉಜಿರೆಯ ಶಾರದಾ ಮಂಟಪದಲ್ಲಿ ಭಕ್ತಿಹೆಜ್ಜೆ ಬಳಗ ನೇತೃತ್ವದಲ್ಲಿ ತಾಲೂಕಿನ ಎಲ್ಲ ಭಜನಾ ಮಂಡಳಿಗಳ ಒಗ್ಗೂಡುವಿಕೆಯಲ್ಲಿ ಭಜಕೆರೆ ಗೊಬ್ಬು- 2025 ಭಜಕ ಸಮ್ಮಿಲನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು.

ಉದ್ಯಮಿ ಮೋಹನ್ ಕುಮಾರ್ ಭಜಕ ಸಮ್ಮಿಲನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಪುತ್ತೂರು ಜಿಲ್ಲಾ ಸಂಚಾಲಕ ವಿನಯಚಂದ್ರ, ಅಳದಂಗಡಿ ಸತ್ಯದೇವತಾ ದೈವಸ್ಥಾನ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ ಶುಭಹಾರೈಸಿದರು. ಪೆರ್ಲ ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿ ಅಧ್ಯಕ್ಷ ತ್ಯಾಂಪಣ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಜೋತಿಷಿ ಡಾ.ಪ್ರಹ್ಲಾದ್ ತಾಮ್ಹನ್ಕರ್ ಧರ್ಮಸ್ಥಳ, ಬೆಳಾಲು ಗ್ರಾಪಂ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ, ವಿಶ್ವ ಹಿಂದು ಪರಿಷತ್ ಬೆಳ್ತಂಗಡಿ ಪ್ರಖಂಡ ಅಧ್ಯಕ್ಷ ವಿಷ್ಣು ಮರಾಠೆ, ಕಳೆಂಜ ವಿವೇಕಾನಂದ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಎಂ.ದಯಾಕರ್, ಶ್ರೀ ಧ.ಮಂ.ಭಜನಾ ಪರಿಷತ್ ರಾಜ್ಯ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್, ಉದ್ಯಮಿ ಪ್ರಶಾಂತ್ ಜೈನ್, ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷ ವೆಂಕಟೇಶ್ವರ ಭಟ್ ಕಜೆ, ಉದ್ಯಮಿ ಕಿರಣ್‌ಚಂದ್ರ ಪುಷ್ಪಗಿರಿ, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ ಶೆಟ್ಟಿ, ಸಮಾಜಸೇವಕ ಡಾ.ರವಿ ಕಕ್ಕೆಜಾಲು, ಕನ್ಯಾಡಿ ಸೇವಾ ಭಾರತಿ ಅಧ್ಯಕ್ಷೆ ಸ್ವರ್ಣ ಗೌರಿ, ಕರಾವಳಿ ಭಜನಾ ಸಂಸ್ಕಾರ ವೇದಿಕೆ ಅಧ್ಯಕ್ಷ ಸಂತೋಷ್ ಮೂಡುಶೆಡ್ಡೆ ಪ್ರಮುಖರಾದ ನವೀನ್ ನೆರಿಯ, ರಾಜೇಶ್ ಪೈ, ಅನಿಲ್ ಕುಮಾರ್, ವಸಂತ ಮರಕಡ, ಶ್ರೀನಿವಾಸ ಗೌಡ, ಜ್ಯೋತಿಲಕ್ಷ್ಮೀ, ನಾರಾಯಣ ಗೌಡ ಉಪಸ್ಥಿತರಿದ್ದರು. ಭಕ್ತಿ ಹೆಜ್ಜೆ ಬಳಗ ಸಂಚಾಲಕ ವಿ.ಹರೀಶ್ ನೆರಿಯ ಸ್ವಾಗತಿಸಿದರು. ಸೌಮ್ಯಾ ರಾವ್ ವಂದಿಸಿದರು.

ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭದಲ್ಲಿ ಉಜಿರೆ ಗ್ರಾಪಂ ಅಧ್ಯಕ್ಷ, ಉಷಾಕಿರಣ ಕಾರಂತ ಭಾಗವಹಿಸಿದ್ದರು. ಭಕ್ತಿ ಹೆಜ್ಜೆ ಬಳಗ ಸಂಟಕ ವಿ.ಹರೀಶ್ ನೆರಿಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಭಜಕ ಪುರುಷೋತ್ತಮ ಕೊಕ್ಕಡ, ಛತ್ರಪತಿ ಶಿವಾಜಿ ಭಜನಾ ಮಂಡಳಿ ಅಧ್ಯಕ್ಷ ನಾರಾಯಣ, ಭಕ್ತಿ ಹೆಜ್ಜೆ ಬಳಗ ಸಂಟಕ ಮಂಜುನಾಥ್ ಶೆಟ್ಟಿ ನಿಡಿಗಲ್, ಛತ್ರಪತಿ ಶಿವಾಜಿ ಭಜನಾ ಮಂಡಳಿ ಸದಸ್ಯ ಸುಧಾಕರ್, ದೈಹಿಕ ಶಿಕ್ಷಣ ಶಿಕ್ಷಕರಾದ ಮೋಹನ್, ಶಶಿಧರ್ ಬೆಳಾಲು ಉಪಸ್ಥಿತರಿದ್ದರು. ಸರಸ್ವತಿ ಭಜನಾ ಮಂಡಳಿ ವಿವೇಕಾನಂದ ನಗರದ ಅಧ್ಯಕ್ಷ ಜನಾರ್ದನ ಸ್ವಾಗತಿಸಿದರು. ಸುರಕ್ಷಾ ಆಚಾರ್ಯ ಕನ್ನಾಜೆ ನಿರೂಪಿಸಿದರು. ಕಿರಣ್ ಕಕ್ಕಿಂಜೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net