

ಕಾರವಾರ: ಸದಾಶಿವಗಡ ಹೈಸ್ಕೂಲ್ ನಲ್ಲಿ ಆಗಸ್ಟ್ 13 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿದೆ ಎಂದು ಸದಾಶಿವಗಡ ಲಯನ್ಸ್ ಕ್ಲಬ್ ಅಧ್ಯಕ್ಷ ಗಣೇಶ ಬಿಷ್ಟಣ್ಣನವರ್ ತಿಳಿಸಿದರು.
ಸುಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಯನ್ಸ್ ಕ್ಲಬ್ ಸದಾಶಿವಗಡ, ಕಾರವಾರ, ಕಲ್ಲೂರು ಎಜುಕೇಶನ್ ಟ್ರಸ್ಟ್, ಪ್ರೇಮಾಶ್ರಮ ಚಾರಿಟೇಬಲ್ ಟ್ರಸ್ಟ್ , ಮರ್ಕ್ಯುರಿ ಶಿಪ್ ರಿಪೇರ್ ಪ್ರೈ.ಲಿ. ಚಿತ್ತಾಕುಲಾ ಗ್ರಾಪಂ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗುದೆ.
ಮಂಗಳೂರಿನ ಡಾ.ಶ್ರೀನಿವಾಸ ಕಾಲೇಜ್ ಹೃದ್ರೋಗ ತಕ್ಞ ಡಾಮಾಮಿತ್ ಕಿರಣ, ಇಆ್ಯಂಡ್ ಟಿ ತಜ್ಞ ಡೇವಿಡ್ ರೊಸಾರಿಯೋ, ಜನರಲ್ ನೆಡಿಸಿನ್ ತಜ್ಞರಾದ ಅನಿತಾ ಸಿಲ್ವರ್ ಮತ್ತು ತಂಡ, ಎಲುಬು, ನರ ರೋಗ ತಜ್ಞರಾದ ಶಶಿರಾಜ ಶೆಟ್ಟಿ, ಚರ್ಮರೋಗ ತಜ್ಞ ಡಾ.ಸೌರಭ ಹೊಳ್ಳ, ಕಣ್ಣಿನ ವಿಭಾಗದ ಡಾ.ದೀಪ್ತಿ ಸೇರಿ ಒಟ್ಟೂ 30 ರಷ್ಟು ತಜ್ಞರು ಪಾಲ್ಗೊಳ್ಳುವರು.
ಇಸಿಜಿ, ಇಕೋ ಮುಂತಾದ ಪರೀಕ್ಷೆಗಳು ಹಾಗೂ ಔಷಧ ಸಂಪೂರ್ಣ ಉಚಿತವಾಗಿದೆ. ಜನರು ಇದರ ಪ್ರಯೋಜನ ಪಡೆಯಬೇಕು.
ಇದನ್ನೂ ಓದಿ:ಅಂಕೋಲಾದ ತೆರೆದ ಬಾವಿಗಳಲ್ಲಿ ನೈಟ್ರೇಟ್ ಅಂಶ
ಆಸಕ್ತರು ನೋಂದಣಿಗೆ ಅಲ್ತಾಪ್ ಶೇಖ್- 9845750183, ಗಣೇಶ ಬಿಷ್ಠಣ್ಣನವರ್-9482209990 ಸಂಪರ್ಕಿಸಬಹುದು ಎಂದರು.
ಇಬ್ರಾಹಿಂ ಕಲ್ಲೂರು, ಶಶಿನಂದನ ಮಾಸೂರಕರ್ ಸುದ್ದಿಗೋಷ್ಠಿಯಲ್ಲಿದ್ದರು.