

ಬೆಂಗಳೂರು : ಸಂವಾದ್ ವಾಕ್ ಮತ್ತು ಶ್ರವಣ ಸಂಸ್ಥೆಯು 20 ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅಂಗವಾಗಿ ಸಂವಾದ್ ಸ್ಪೀಚ್ ಅಂಡ್ ಹಿಯರಿಂಗ್, ಬೆಂಗಳೂರಿನ ಎಎಲ್‌ಐಎಂಸಿಓ ಸಹಯೋಗದೊಂದಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಶ್ರವಣ ಸಾಧನ ವಿತರಣಾ ಶಿಬಿರವನ್ನು ಹಮ್ಮಿಕೊಂಡಿದೆ
ಶಿಬಿರವು ಏ.25 ರಿಂದ 30ರ ವರೆಗೆ ನಡೆಯಲಿದ್ದು, ಅರ್ಹ ಫಲಾನುಭವಿಗಳು ಆಧಾರ ಕಾರ್ಡ್, ಬಿಪಿಎಲ್ ಕಾರ್ಡ್, ಆದಾಯ ಪ್ರಮಾಣಪತ್ರ, ಯುಡಿಐಡಿ ಕಾರ್ಡ್ ಮತ್ತು 2 ಪಾಸ್‌ಪೋರ್ಟ್ ೆಟೋಗಳೊಂದಿಗೆ ಆಗಮಿಸಿ ಹೆಸರು ನೊಂದಾಯಿಸಬೆಕು.
ನೋಂದಣಿ ಮತ್ತು ಹೆಚ್ಚಿನ ವಿಚಾರಣೆಗಳಿಗಾಗಿ, ನಂ.18, 1ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಆನಂದಗಿರಿ ವಿಸ್ತರಣೆ, ಹೆಬ್ಬಾಳ ಪೊಲೀಸ್ ಠಾಣೆ ಹತ್ತಿರ, ಹೆಬ್ಬಾಳ, ಬೆಂಗಳೂರು-560024, ದೂ: 96633 88623 ಅಥವಾ 94802 95004 ಸಂಪರ್ಕಿಸಬಹುದು.
ಈ ಉದಾತ್ತ ಉಪಕ್ರಮವು ಶ್ರವಣದೋಷವುಳ್ಳ ಸಮುದಾಯವನ್ನು ಸಬಲೀಕರಣಗೊಳಿಸುವ ಮತ್ತು ಶ್ರವಣ ಮತ್ತು ಮಾತಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ ಎಂದು ಸಂವಾದ್ ವಾಕ್ ಶ್ರವಣ ಸಂಸ್ಥೆಯ ಟ್ರಸ್ಟೀ ರಾಧಿಕಾ ಪೂವಯ್ಯ ಹೇಳಿದ್ದಾರೆ.