ಆರೋಗ್ಯ ಉಚಿತ ತಪಾಸಣೆ, ಔಷಧ ವಿತರಣೆ

New Project (32)
Published on

ಉಪ್ಪಿನಂಗಡಿ: ಇಳಂತಿಲ ಶ್ರೀ ಕೇಶವ ಶಿಶು ಮಂದಿರದಲ್ಲಿ ಡಾ.ಶ್ರುತಿ ಪಾರ್ವತಿ ಕೈಲಾರ್ ಸ್ವಾಸ್ಥೃ, ಪ್ರಸನ್ನ ಆಯುರ್ವೇದಿಕ್ ಕಾಲೇಜು ಬೆಳ್ತಂಗಡಿ, ಶ್ರೀ ಭಾರತಿ ಮಾತೃ ಮಂಡಳಿ, ಇಳಂತಿಲ ಗ್ರಾಪಂ ಹಾಗೂ ಕೇಶವ ಶಿಶು ಮಂದಿರದ ಸಹಯೋಗದಲ್ಲಿ ಆರೋಗ್ಯ ಉಚಿತ ತಪಾಸಣೆ ಹಾಗೂ ಔಷಧ ವಿತರಣಾ ಕಾರ್ಯಕ್ರಮ ನಡೆಯಿತು.

ಪ್ರಸನ್ನ ಆಯುರ್ವೇದಿಕ್ ಕಾಲೇಜಿನ ಡಾ.ದುರ್ಗಾಪ್ರಸಾದ್ ಉದ್ಘಾಟಿಸಿದರು. ಡಾ.ಶ್ರುತಿ ಪಾರ್ವತಿ ಕೈಲಾರ್ ಪ್ರಸ್ತಾವನೆಗೈದರು. ಶಿಶು ಮಂದಿರ ಅಧ್ಯಕ್ಷ ಗಣಪತಿ ಭಟ್ ಮೂಡಾಜೆ, ಮಾತೃ ಮಂಡಳಿ ಅಧ್ಯಕ್ಷೆ ಗೀತಾ, ಕೈಲಾರ್ ಸತ್ಯನಾರಾಯಣ ಭಟ್ ಅತಿಥಿಗಳಾಗಿದ್ದರು.

ಪ್ರಸನ್ನ ಆಯುರ್ವೇದಿಕ್ ಕಾಲೇಜು ವೈದ್ಯರಾದ ಡಾ.ದೇವಾನಂದ, ಡಾ.ಅಕ್ಷತಾ, ಡಾ.ಮೇಘಶ್ರೀ, ಡಾ.ವೈಷ್ಣವಿ ತಪಾಸಣೆ ನಡೆಸಿದರು. ಡಾ.ಕೆ.ಜಿ.ಭಟ್, ಡಾ.ಸುಪ್ರಿತ್ ಲೋಬೋ, ಡಾ.ಗೋವಿಂದಪ್ರಸಾದ್ ಕಜೆ, ಡಾ.ಶ್ರೀರಾಮ್, ಚಂದ್ರಿಕಾ ಭಟ್, ತಿಮ್ಮಪ್ಪ ಗೌಡ, ಮಾಯಿಲ್ತೋಡಿ ಈಶ್ವರ ಭಟ್, ಪೆಲಪ್ಪಾರ್ ವೆಂಕಟರಮಣ ಭಟ್, ಶಂಕರ್ ಭಟ್ ನಿಡ್ಡಾಜೆ, ಕೈಲಾರ್ ರಾಜಗೋಪಾಲ ಭಟ್, ಸುಂದರ ಶೆಟ್ಟಿ, ರವೀಂದ್ರ ಆಚಾರ್ಯ, ಲಕ್ಷ್ಮಣ ಗೌಡ, ಭವ್ಯ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net