

ಹಾನಗಲ್ಲ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ವತಿಯಿಂದ ಪಟ್ಟಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಅ. 1ರಂದು ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಹೇಳಿದರು.
ಪಟ್ಟಣದಲ್ಲಿನ ಪಕ್ಷದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ವೈದ್ಯಕೀಯ ಸಂಘ, ಕೆಎಲ್ಇ ಸುಚಿರಾಯು ಆಸ್ಪತ್ರೆ, ಡಾ.ಮಹೇಶ ನಾಲವಾಡ ಫೌಂಡೇಷನ್ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿದೆ.
ಇದರೊಂದಿಗೆ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರ, ಬಿಜೆಪಿ ಯುವ ಮೋರ್ಚಾ ಸಹಯೋಗದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ವಿವಿಧ ವಿಭಾಗಗಳ ತಜ್ಞ ವೈದ್ಯರಾದ ಡಾ. ತಾಕಪ್ಪ ಗಚ್ಚಿ, ಡಾ.ಎಂ.ಸಿ. ತಪಶೆಟ್ಟಿ, ಡಾ.ಸಂಕೇತ ಪಾಟೀಲ, ಡಾ.ಸರಸ್ವತಿ, ಡಾ. ವಿಶಾಲ ಕುಲಕರ್ಣಿ, ದೀಪಕ್ ಜಿತೂರಿ, ಡಾ. ವೀರೇಶ ಹುಬ್ಬಳ್ಳಿ, ಡಾ.ನೀಲಕಮಲ ಹಳ್ಳೂರ, ಡಾ. ರವಿ ಸಂಗಾಪುರ, ಡಾ. ಗೋವಿಂದ ದೇಸಾಯಿ, ಡಾ. ಶ್ರೇಯಸ್ ಕನಕಪುರ, ಡಾ. ಸೀತಾ ಮುತಾಲಿಕ, ಡಾ. ಸುಹೇಲ್ ಅಂಬಿ, ಡಾ. ಕೆ.ಜಿ. ಬ್ಯಾಕೋಡ, ಡಾ. ರಂಜನ ಜೀವಣ್ಣನವರ ಪಾಲ್ಗೊಳ್ಳುವರು.
ಶಿಬಿರದಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್, ಇ-ಶ್ರಮಿಕ್ ಕಾರ್ಡ್ ನೋಂದಣಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಐಎಂಎ ತಾಲೂಕು ಅಧ್ಯಕ್ಷ ಡಾ.ಎನ್.ಆರ್. ದೇಶಪಾಂಡೆ, ಬಿಜೆಪಿ ಮಾಧ್ಯಮ ಸಂಚಾಲಕ ಡಾ. ಸುನೀಲ ಹಿರೇಮಠ, ವಿವಿಧ ಪ್ರಕೋಷ್ಟಗಳ ಪದಾಧಿಕಾರಿಗಳಾದ ಶಿವಲಿಂಗಪ್ಪ ತಲ್ಲೂರ, ರಾಜಣ್ಣ ಪಟ್ಟಣದ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಬಸವರಾಜ ಹಾದಿಮನಿ, ಮಹೇಶ ಬಣಕಾರ, ಮಲ್ಲಿಕಾರ್ಜುನ ಅಗಡಿ ಸುದ್ದಿಗೋಷ್ಠಿಯಲ್ಲಿ ಇದ್ದರು.