ಮಕ್ಕಳಿಗಾಗಿ ಉಚಿತ ಲಲಿತ ಕಲಾ ಶಿಬಿರ

Published on

ಹುಣಸೂರು: ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಗ್ರಾಮೀಣ ಮಕ್ಕಳಿಗಾಗಿ 4 ದಿನಗಳ ಉಚಿತ ಲಲಿತ ಕಲಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಬಾ ಸೃಷ್ಟಿ ತಂಡದ ಕಾರ್ಯದರ್ಶಿ ಚೇತನ್ ಜಗತಾಪ್ ತಿಳಿಸಿದ್ದಾರೆ.

ಮುಳ್ಳೂರು ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಅ.31ರಿಂದ ನ.3ವರೆಗೆ ಶಿಬಿರ ಆಯೋಜನೆಗೊಂಡಿದ್ದು, ಕಾಗದದ ಕತ್ತರಿ ಕಲೆ, ಕಿರೀಟಗಳ ತಯಾರಿಕೆ, ಮುಖವಾಡಗಳು, ಭಿತ್ತಿಚಿತ್ರಗಳು, ಚಿತ್ರಕಲೆ, ಹಸೆ ಚಿತ್ರ ಮುಂತಾದವುಗಳ ಕುರಿತು ಶಿಬಿರದಲ್ಲಿ ಹೇಳಿಕೊಡಲಾಗುತ್ತದೆ. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಒರಿಗಾಮಿ ಕಲಾವಿದರು ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಚ್.ವಿ.ಮುರಳೀಧರ್, ಮೈಸೂರಿನ ಎಂ.ಎಫ್.ಹುಸೇನಿ ಮತ್ತು ಕಲಬುರಗಿಯ ಮಂಜುನಾಥ್ ಸಿಂಧೆ ಭಾಗವಹಿಸಲಿದ್ದಾರೆ. ಕಲೆಯಲ್ಲಿ ಆಸಕ್ತಿಯುಳ್ಳ ಮಕ್ಕಳು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net