150 ಜನರಿಗೆ ಕಣ್ಣು ಉಚಿತ ತಪಾಸಣೆ

150 ಜನರಿಗೆ ಕಣ್ಣು ಉಚಿತ ತಪಾಸಣೆ
Published on

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಣಕಟ್ಟೆ ಹೋಬಳಿಯ ದಿಬ್ಬೊರು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕಣಕಟ್ಟೆ ಶ್ರೀ ವಿದ್ಯಾರಣ್ಯ ಪದವಿಪೂರ್ವ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಕಡೂರು ತಾಲೂಕಿನ ಶರತ್ ಕಣ್ಣಿನ ಆಸ್ಪತ್ರೆ ವತಿಯಿಂದ ಕಣ್ಣು ಪರೀಕ್ಷಾ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಶಿಬಿರದಲ್ಲಿ 150ಕ್ಕೂ ಹೆಚ್ಚು ಜನರಿಗೆ ನೇತ್ರಾ ತಪಾಸಣೆ ಮಾಡಲಾಯಿತು. 25 ಜನರಿಗೆ ಉಚಿತ ಶಸ್ತ್ರ ಚಿಕಿತ್ಸೆಗೆ ಶಿಫಾರಸು ಮಾಡಲಾಯಿತು.

ನೇತ್ರ ಪರೀಕ್ಷಕ ರಂಗಪ್ಪ ಮಾತನಾಡಿದರು. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಗ್ರಾ.ಪಂ.ಸದಸ್ಯ ರಂಗನಾಥ್, ಮಾಜಿ ಸದಸ್ಯ ಕಾಂತರಾಜು, ಬಿ.ಆರ್.ನಟರಾಜ್, ಪ್ರಾಂಶುಪಾಲ ಶಶಿಕುಮಾರ್, ಹನುಮೇಶ್, ಲೋಕಪಾವನಶೆಟ್ಟಿ, ಸಿದ್ದರಾಮ್ ಕೃಷ್ಣ, ಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net