ಕೌಕ್ರಾಡಿಯಲ್ಲಿ ನೇತ್ರ ತಪಾಸಣಾ ಉಚಿತ ಶಿಬಿರ

Kkd_Eye Camp
Published on

ನೆಲ್ಯಾಡಿ: ಕೌಕ್ರಾಡಿ ಗ್ರಾಪಂ ಎಸ್‌ಎಸ್‌ವಿ ಗೆಳೆಯರ ಬಳಗ ದೋಂತಿಲ ನೇತೃತ್ವದಲ್ಲಿ ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ಜಿಲ್ಲಾ ನೇತ್ರ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ನಿವಾರಣಾ ವಿಭಾಗ ಮಂಗಳೂರು, ಡಾ.ಪಿ ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೆಬಲ್ ಟ್ರಸ್ಟ್ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಇತ್ತೀಚೆಗೆ ಕೌಕ್ರಾಡಿ ಗ್ರಾಪಂ ಸಭಾಭವನದಲ್ಲಿ ನಡೆಯಿತು.

ಕೌಕ್ರಾಡಿ ಗ್ರಾಪಂ ಅಧ್ಯಕ್ಷ ಉದಯ ಕುಮಾರ್ ಗೌಡ ಉದ್ಘಾಟಿಸಿದರು. ಸಿ.ಆರ್.ಪಿ ಪ್ರಕಾಶ್, ಗ್ರಾಪಂ ಸದಸ್ಯರಾದ ಸುಧಾಕರ್, ಮಹೇಶ್, ಪುಷ್ಪ, ದೇವಕಿ, ಎಸ್‌ಎಸ್‌ವಿ ಗೆಳೆಯರ ಬಳಗದ ಅಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ಸುಧೀಶ್, ಹೊಸಮಜಲು ಶಾಲಾ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು. ಪ್ರಸಾದ್ ನೇತ್ರಾಲಯದ ಪಿ.ಜಿ.ವೈದ್ಯರಾದ ನವ್ಯ ಕಣ್ಣಿನ ಆರೈಕೆ ಮತ್ತು ಲಭ್ಯ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ದೇವಿಕಾ ಸ್ವಾಗತಿಸಿದರು. ಸುಧೀರ್ ಕುಮಾರ್ ನಿರೂಪಿಸಿದರು. ಪ್ರಸಾದ್ ನೇತ್ರಾಲಯದ ವೈದ್ಯರು ಮತ್ತು ಕೌಕ್ರಾಡಿ ಗ್ರಾಪಂ ಸಿಬ್ಬಂದಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net