

ಕೊಕ್ಕರ್ಣೆ: ಸೂರಾಲು ವಲಯ ವಿಪ್ರ ಟ್ರಸ್ಟ್ ಮತ್ತು ಮಣಿಪಾಲ ದಂತ ವಿಜ್ಞಾನ ವಿದ್ಯಾಲಯದ ಆಶ್ರಯದಲ್ಲಿ ದಂತ ಉಚಿತ ತಪಾಸಣೆ ಶಿಬಿರ ಪೇತ್ರಿ ವಿಭುಶಂಕರ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು.
ಮಣಿಪಾಲ ದಂತ ವಿಜ್ಞಾನ ವಿದ್ಯಾಲಯದ ಪೆರಿಯೊಡೊಂಟೊಲಜಿ ವಿಭಾಗದ ತಜ್ಞೆ ಡಾ.ಜ್ಯೋತಿ ಕಾರ್ಯಕ್ರಮ ಉದ್ಘಾಟಿಸಿ ದಂತ ಆರೋಗ್ಯದ ಮಾಹಿತಿ ನೀಡಿದರು.
ವಿಪ್ರ ಟ್ರಸ್ಟ್‌ನ ಅಧ್ಯಕ್ಷ ಮಂಜುನಾಥ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ನಾಗರಾಜ ಕೆದ್ಲಾಯ, ಪ್ರದೀಪ್ ಹೆಬ್ಬಾರ್, ಜಯರಾಮ ಕ್ರಮಧಾರಿ, ವೀಣಾ ಶಾನುಭೋಗ್, ರಾಜೇಶ್ವರಿ ಶ್ಯಾನುಭೋಗ್, ಮಣಿಪಾಲ ಕೆಎಂಸಿ ದಂತ ವಿಜ್ಞಾನ ವಿದ್ಯಾಲಯದ ಡಾ.ಮಾಧುರ್ಯ ಎನ್.ಕೆದ್ಲಾಯ ಮತ್ತಿತರರಿದ್ದರು. ವಿಪ್ರ ಟ್ರಸ್ಟ್, ಶಿವಾನಿ ವಿಪ್ರ ಮಹಿಳಾ ಮಂಡಳಿ, ವಲಯ ಬ್ರಾಹ್ಮಣ ಸಭಾದ ಸದಸ್ಯರು ಪಾಲ್ಗೊಂಡರು.