

ಬೆಂಗಳೂರು: ಕೆನರಾ ಬ್ಯಾಂಕ್ ವತಿಯಿಂದ ನಿರುದ್ಯೋಗಿಗಳಿಗೆ ಕಂಪ್ಯೂಟರ್, ಹಾರ್ಡ್‌ವೇರ್ ಹಾಗೂ ನೆಟ್‌ವರ್ಕ್ ವಿಷಯ ಕುರಿತು ಮೂರು ತಿಂಗಳು ಉಚಿತ ತರಬೇತಿ ಆಯೋಜಿಸಿದೆ.
ಡಿಸೆಂಬರ್ ಮೂರನೇ ವಾರದಿಂದ ತರಬೇತಿ ಆರಂಭವಾಗಲಿದೆ. 18-27 ವರ್ಷದ ಅಭ್ಯರ್ಥಿಗಳು ಕನಿಷ್ಠ ಎಸ್ಎಸ್ಎಲ್ಸಿ ಪಾಸಾಗಿರಬೇಕು. ಪಿಯುಸಿ, ಡಿಪ್ಲೊಮಾ ಹಾಗೂ ಪದವಿ ಹೊಂದಿದವರಿಗೆ ಆದ್ಯತೆ ಇದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಗರಿಷ್ಠ 30 ವಯಸ್ಸು ಆಗಿರಬೇಕು. ಬೆಂಗಳೂರಿನ ಮಲ್ಲೇಶ್ವರನಲ್ಲಿರುವ ಕೆನರಾ ಬ್ಯಾಂಕ್‌ನ ಮಾಹಿತಿ ತಂತ್ರಜ್ಞಾನ ತರಬೇತಿಯಲ್ಲಿ ಪ್ರತಿ ನಿತ್ಯ 11 ಗಂಟೆಗೆ ಅರ್ಹತಾ ಪರೀಕ್ಷೆ ಹಾಗೂ ಸಂದರ್ಶನ ನಡೆಯಲಿದೆ.
ಹೆಚ್ಚಿನ ವಿವರಕ್ಕೆ ನಿರ್ದೇಶಕರು, ಕೆನರಾ ಬ್ಯಾಂಕ್ ಮಾಹಿತಿ, ತಂತ್ರಜ್ಞಾನ ತರಬೇತಿ ಸಂಸ್ಥೆ, ಚಿತ್ರಾಪುರ ಭವನ, ಮಲ್ಲೇಶ್ವರ, ಬೆಂಗಳೂರು ಇಲ್ಲಿನ ವಿಳಾಸಕ್ಕೆ ಭೇಟಿ ನೀಡಿ. ದೂ: 080-23440036, 23463580, 9448538107ಕ್ಕೆ ಸಂಪರ್ಕಿಸಿ.