ರಕ್ತದಾನ, ನೇತ್ರ, ಮಧುಮೇಹ ಉಚಿತ ತಪಾಸಣೆ ಶಿಬಿರ

udhgatane
ಕಾರ್ಯಕ್ರಮವನ್ನು ಗಂಗಾಧರ ರಾವ್ ಉದ್ಘಾಟಿಸಿದರು.
Published on

ಹೆಬ್ರಿ: ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರುಸಮುದಾಯ ಭವನದಲ್ಲಿ ಉಚಿತ ನೇತ್ರ, ಬಿಪಿ ಹಾಗೂ ಮಧುಮೇಹ ತಪಾಸಣೆ, ಬೃಹತ್ ರಕ್ತದಾನ ಶಿಬಿರ ಭಾನುವಾರ ನಡೆಯಿತು.

ಶ್ರೀ ಅನಂತಪದ್ಮನಾಭ ಆಟೋ ರಿಕ್ಷಾ ಚಾಲಕ ವಾಲೀಕ ಸಂ, ತಾಲೂಕು ರಿಕ್ಷಾ ವಾಲೀಕ ಚಾಲಕರ ಸಂ, ಶ್ರೀ ಮಹಾಗಣಪತಿ ಆಟೋರಿಕ್ಷಾ ಚಾಲಕ ವಾಲೀಕ ಸಂ ಮುದ್ರಾಡಿ, ಆಟೋರಿಕ್ಷಾ ಚಾಲಕ ವಾಲೀಕ ಸಂ ಮುನಿಯಾಲು, ರೈತ ಸೇವಾ ಗ್ರಾಮೋದ್ಯೋಗ ಕನ್ಯಾನ, ಭರತ್ ಕುವಾರ್ ಶೆಟ್ಟಿ ಮನು ಲಾ ಚೇಂಬರ್, ಉಡುಪಿ ಜಿಲ್ಲಾಸ್ಪತ್ರೆ, ಹೆಬ್ರಿ ಕಣ್ಣಿನ ಆಸ್ಪತ್ರೆ, ಅಂಬಲಪಾಡಿ ಸುಪ್ರೀಂ ಡಯಾಗೋಸ್ಟಿಕ್ ಸಹಯೋಗದೊಂದಿಗೆ ಶಿಬಿರ ಆಯೋಜಿಸಲಾಗಿತ್ತು.

ಶಿಬಿರ ಉದ್ಘಾಟಿಸಿದ ಗಂಗಾಧರ ರಾವ್ ಮಾತನಾಡಿ, ಸಂದ ವತಿಯಿಂದ ನಡೆದ ಸವಾಜಮುಖಿ ಚಟುವಟಿಕೆ ಅನೇಕರಿಗೆ ಉಪಯೋಗ ಆಗಿದೆ. ಈ ಮೂಲಕ ಬಡವರ ಸೇವೆ ವಾಡುವ ಕೆಲಸ ಎಲ್ಲರಿಂದ ನಡೆಯಬೇಕು ಎಂದರು.

ವೈದ್ಯ ಡಾ.ಉತ್ಸವ ಸಿ.ಶೆಟ್ಟಿ, ಕನ್ಯಾನ ರೈತ ಸೇವಾ ಗ್ರಾಮೋದ್ಯೋಗದ ಲಕ್ಷ್ಮೀನಾರಾಯಣ್ ನಾಯಕ್, ಸಂದ ಅಧ್ಯಕ್ಷ ಪ್ರಭಾಕರ್ ಪೂಜಾರಿ ಕುಚ್ಚೂರು, ಪ್ರಮುಖರಾರಾದ ಭರತ್‌ಕುವಾರ್ ಶೆಟ್ಟಿ, ಕೃಷ್ಣ ಶೆಟ್ಟಿಗಾರ್, ಸುಬ್ರಹ್ಮಣ್ಯ ದೇವಾಡಿಗ, ರಾವೇಂದ್ರ ಕುಲಾಲ್, ಅರವಿಂದ ಪೂಜಾರಿ ಗುಳಿಬೆಟ್ಟು, ನಾಗರಾಜ ಶೆಟ್ಟಿಗಾರ್, ವೆಂಕಟೇಶ್ ನಾಯ್ಕ, ಜಯಕರ ಪೂಜಾರಿ, ಪ್ರವೀಣ್ ಪೂಜಾರಿ, ಶಿವರಾಮ್ ಶೆಟ್ಟಿಗಾರ್, ದಿನೇಶ್ ನಾಯ್ಕ ಉಪಸ್ಥಿತರಿದ್ದರು. ಸಂದ ಅಧ್ಯಕ್ಷ ಪ್ರಭಾಕರ್ ಪೂಜಾರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net