ಆರ್‌ಸಿಬಿ ಅಭಿಮಾನಿಯಿಂದ ಉಚಿತ ಆಟೋ ಸೇವೆ

ಆರ್‌ಸಿಬಿ ಅಭಿಮಾನಿಯಿಂದ ಉಚಿತ ಆಟೋ ಸೇವೆ
Published on

ಕೊಳ್ಳೇಗಾಲ: ಐಪಿಎಲ್ ಟಿ-20 ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಚಾಂಪಿಯನ್ ಆಗಿ ಹೊರಹೊಮ್ಮಿದ ಹಿನ್ನಲೆ ಗುರುವಾರ ಕೊಳ್ಳೇಗಾಲದಲ್ಲಿ ಪ್ಯಾಸೇಂಜರ್ ಆಟೋ ಚಾಲಕರೊಬ್ಬರು ಗುರುವಾರ ಒಂದು ದಿನದ ಉಚಿತ ಪ್ರಯಾಣ ಸೇವೆ ನೀಡಿ ಅಭಿಮಾನ ಮೆರೆದರು.

ತಾಲೂಕಿನ ಪಾಳ್ಯ ಗ್ರಾಮದ ಆಟೋ ಚಾಲಕ ಮಧು ನಾಯಕ್ ಎಂಬುವರು ಕೆಲ ವರ್ಷಗಳಿಂದ ಆಟೋ ಚಾಲಕ ವೃತ್ತಿ ಮಾಡುತ್ತಿದ್ದು. ಪ್ರತಿ ನಿತ್ಯ ಕೊಳ್ಳೇಗಾಲದಿಂದ ಪಾಳ್ಯದವರೆಗೆ ಆಟೋವನ್ನು ಪ್ರಯಾಣಿಕರನ್ನು ಕರೆದೊಯ್ದು ಇದರಿಂದ ಬರುವ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇವರು ಆರ್‌ಸಿಬಿ ತಂಡದ ವಿರಾಟ್ ಕೊಯ್ಲಿಯ ಅಭಿಮಾನಿ.

ಮಂಗಳವಾರ ಐಪಿಎಲ್ ಟಿ-20 ಪಂದ್ಯಾವಳಿಯ ಫೈನಲ್‌ನಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದ್ದ ಹಿನ್ನೆಲೆ ಒಂದು ದಿನ ಪೂರ್ತಿ ಸಾರ್ವಜನಿಕರಿಗೆ ಉಚಿತವಾಗಿ ಪ್ರಯಾಣ ವ್ಯವಸ್ಥೆ ಕಲ್ಪಿಸಿದ್ದರು.

ಈ ಬಗ್ಗೆ ಮಧು ನಾಯಕ್ ಮಾತನಾಡಿ, ಆರ್‌ಸಿಬಿಯ ಚಾಂಪಿಯನ್ ಗೆಲುವು ತನ್ನ ಹೃದಯವನ್ನು ತಟ್ಟಿದ ಕಾರಣ, ಬಹಳ ಅಭಿಮಾನದಿಂದ ಒಂದು ದಿನ ಉಚಿತ ಪ್ರಯಾಣ ಸೇವೆ ನೀಡಿದ್ದೇನೆ. 18 ವರ್ಷದ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಬಾರಿಗೆ ಆರ್‌ಸಿಬಿ ತಂಡ ಗೆದ್ದಿರುವುದು ರಾಜ್ಯದ ಎಮ್ಮೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net