

ಉಡುಪಿ: ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ಕಾರು ಖರೀದಿಸಿ ವಂಚಿಸಿದ ಐವರ ವಿರುದ್ಧ ಉಡುಪಿ ತಾಲೂಕು ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಕ್ರೆಡಿಟ್ ಕೋ-ಆಪ್ ಸೊಸೈಟಿ ದೂರು ದಾಖಲಿಸಿದೆ. 2020ರ ೆ.20ರಂದು ಕಾರ್ಕಳದ ಸುಷ್ಮಾ ಕುಕ್ಕುಂದೂರು ಎಂಬುವರು ಕಾರು ಖರೀದಿಸಲು ಸಾಲ ನೀಡುವಂತೆ ಕೇಳಿಕೊಂಡಿದ್ದು, ಅದಕ್ಕೆ ಕಾರ್ಕಳದ ಪ್ರದೀಪ್ ಅಜೆಕಾರು, ಉಡುಪಿಯ ಶುಭಲಕ್ಷ್ಮೀ ಕಡೇಕಾರ್ ಎಂಬುವರು ಜಾಮೀನು ನೀಡಿದ್ದರು. ಅಬ್ದುಲ್ ಅಜೀಜ್ ಸಂಪ್ಯ ಪುತ್ತೂರು, ಹಾಗೂ ಸುರತ್ಕಲ್ ಕೃಷ್ಣನಗರದ ಇರ್ಫಾನ್ ಖಾದರ್ ಎಂಬುವರು ಕೊಟೇಷನ್ ನೀಡಿದ್ದರು. ಅವರ ಖಾತೆಗೆ ಬ್ಯಾಂಕ್‌ನವರು 8.50 ಲಕ್ಷ ರೂ. ಸಾಲದ ಹಣ ಜಮಾ ಮಾಡಿದ್ದರು. ಕಾರು ಪಡೆಯಲು ಸಾಲ ಪಡೆದಿದ್ದ ಸುಷ್ಮಾ, ವರ್ಷ ಕಳೆದರೂ ಕಂತು ಭರಿಸಿರಲಿಲ್ಲ. ಬ್ಯಾಂಕ್‌ನವರು ವಾಹನ ಜಪ್ತಿ ವಾಡಲು ಹೋದಾಗ ಕಾರು ಇಲ್ಲದೇ ಇರುವುದನ್ನು ವಿಚಾರಿಸಿದಾಗ ನಕಲಿ ಕೊಟೇಷನ್ ಕೊಟ್ಟು ಹಣ ಪಡೆದಿರುವುದು ತಿಳಿದುಬಂದಿದೆ. ಐವರೂ ಸೇರಿಕೊಂಡು ನಕಲಿ ದಾಖಲೆ ಸೃಷ್ಟಿಸಿ, ಸುಳ್ಳು ಕೊಟೇಷನ್ ನೀಡಿ ವಂಚಿಸಿದ್ದಾರೆ ಎಂದು ಬ್ಯಾಂಕ್ ಸಿಇಒ ಜೀವನ್ ಸುಕುವಾರ್ ಆಂಡ್ರೂಸ್ ದೂರು ನೀಡಿದ್ದು, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.