

ಕುಂದಾಪುರ: ಕೋಡಿಕಡಲ ಕಿನಾರೆ ಹಾಗೂ ಸೀ ವಾಕ್ ಪ್ರದೇಶಕ್ಕೆ ವಿವಿಧೆಡೆಗಳಿಂದ ಪ್ರವಾಸಿಗರು ಆಗಮಿಸುವುದರಿಂದ ಅವರ ಅನುಕೂಲಕ್ಕಾಗಿ ಶೌಚಗೃಹ ವ್ಯವಸ್ಥೆ ಬೇಕೆಂಬ ಬೇಡಿಕೆ ಹಲವು ವರ್ಷಗಳಿಂದಿತ್ತು. ಶಾಸಕರ ಮುತುವರ್ಜಿಯಲ್ಲಿ ಪುರಸಭೆಯ ಸದಸ್ಯರ ನೇತೃತ್ವದಲ್ಲಿ ಶೌಚಗೃಹ ನಿರ್ಮಿಸಿಕೊಡಲಾಗಿದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಈ ಪರಿಸರ ಸ್ವಚ್ಛವಾಗಿರಲು ಸ್ಥಳೀಯರು, ಪ್ರವಾಸಿಗರ ಸಹಕಾರ ಅಗತ್ಯ ಎಂದು ಕುಂದಾಪುರ ಪುರಸಭೆ ಅಧ್ಯಕ್ಷ ಕೆ.ಮೋಹನದಾಸ ಶೆಣೈ ಹೇಳಿದರು.
ಕುಂದಾಪುರ ಪುರಸಭಾ ವ್ಯಾಪ್ತಿಯ ಕೋಡಿ ಸೀವಾಕ್ ಬಳಿ ಸ್ವಚ್ ಭಾರತ್ ಮಿಷನ್ (ನಗರ) ಯೋಜನೆ ಅಡಿಯಲ್ಲಿ ಸುಮಾರು 25 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಾರ್ವಜನಿಕ ಶೌಚಗೃಹವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ಪುರಸಭೆ ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ., ಪುರಸಭೆ ಸದಸ್ಯರಾದ ಲಕ್ಷ್ಮೀ ಬಾಯಿ ಕೋಡಿ, ಕಮಲಾ ಮಂಜುನಾಥ, ದೇವಕಿ ಸಣ್ಣಯ್ಯ, ಶೇಖರ್ ಪೂಜಾರಿ, ಸ್ಥಳೀಯರಾದ ಶಂಕರ್ ಪೂಜಾರಿ, ಕೋಡಿ ಗೋಪಾಲ ಪೂಜಾರಿ, ಸುನಿಲ್ ಪೂಜಾ ಕೋಡಿ, ಮೋಹನ ಎಂ.ಕುಂದರ್, ನಾಗರಾಜ್ ಕಾಂಚನ ಕೋಡಿ, ತಿಮ್ಮಪ್ಪ ಖಾರ್ವಿ ಕೋಡಿ, ಗುತ್ತಿಗೆದಾರ ಚಂದ್ರಹಾಸ, ಪುರಸಭೆ ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕ ರಾಘವೇಂದ್ರ ಎಂ.ನಾಯಕ್, ಕಿರಿಯ ಅಭಿಯಂತರೆ ನಯನತಾರ, ಪುರಸಭೆಯ ಅಧಿಕಾರಿ ಗಣೇಶ್ ಕುಮಾರ್ ಜನ್ನಾಡಿ ಉಪಸ್ಥಿತರಿದ್ದರು.
ಕೋಡಿ ಭಾಗಕ್ಕೆ ಹೆಚ್ಚು ಪ್ರವಾಸಿಗರು ಆಗಮಿಸುವ ಕಾರಣ ಸಾರ್ವಜನಿಕರ ಬೇಡಿಕೆ ಹಿನ್ನೆಲೆ ಸಾರ್ವಜನಿಕ ಶೌಚಗೃಹ ನಿರ್ಮಿಸಿದ್ದು, ಮಹಿಳೆಯರು, ಪುರುಷರು ಹಾಗೂ ವಿಶೇಷ ಚೇತನರಿಗೆ 2 ಶೌಚಗೃಹ ನಿರ್ಮಿಸಲಾಗಿದೆ. ಸದ್ಯ ಪುರಸಭೆ ಇದರ ನಿರ್ವಹಣೆ ಮಾಡಲಿದ್ದು ಮುಂದಿನ ದಿನಗಳಲ್ಲಿ ಪೇ ಆಂಡ್ ಯೂಸ್ ಮಾದರಿ ಮಾಡುವ ಚಿಂತನೆಯಿದೆ. ಆನಂದ ಜೆ., ಮುಖ್ಯಾಧಿಕಾರಿ ಕುಂದಾಪುರ ಪುರಸಭೆ