

ಪಡುಬಿದ್ರಿ: ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿ ಆನ್ಲೈನ್ನಲ್ಲಿ ಹಣ ಡೆಪಾಸಿಟ್ ಮಾಡುವ ವಂಚನೆ ವಿರುದ್ಧ ಕಾಪು ಪಡು ಗ್ರಾಮದ ಮೋಹನ್ ಕೋಟ್ಯಾನ್ ಎಂಬುವರು ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೋಹನ್ ಕೋಟ್ಯಾನ್ ಟೆಲಿಗ್ರಾಂ ಖಾತೆಗೆ ಮೇ 8ರಂದು ಇಬ್ಬರು ಅಪರಿಚಿತ ವ್ಯಕ್ತಿಗಳಿಂದ ಲಿಂಕ್ ಬಂದಿದ್ದು ಆ ಲಿಂಕ್ ಪ್ರಕಾರ 600 ರೂಪಾಯಿಗೆ 660 ರೂಪಾಯಿ ಹಣ ಲಾಭಾಂಶದೊಂದಿಗೆ ಅವರ ಖಾತೆಗೆ ಜಮಾ ಆಗಿತ್ತು. ನಂತರ ಅದೇ ರೀತಿ ಟಾಸ್ಕ್ ಕೊಟ್ಟು ಶೇ. 60 ಲಾಭಾಂಶ ಬರುತ್ತದೆ ಎಂದು ಹಂತಹಂತವಾಗಿ 8 ಬಾರಿ 7,26,000 ರೂ. ಹಣ ಡೆಪಾಸಿಟ್ ಮಾಡಿಸಿ ಬಳಿಕ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.