

ವಿಜಯವಾಣಿ ಸುದ್ದಿಜಾಲ ಉಡುಪಿ
ಇಪ್ಪತ್ತೈದು ವರ್ಷದಷ್ಟು ಹಳೆಯದಾದ ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ನಲ್ಲಿ ತಂದೆಯೊಂದಿಗೆ ದೇಶ ಸುತ್ತಿದ ಹಾಗೂ ವಿಶ್ವದ 2ನೇ ಅತಿ ಎತ್ತರದ ಪ್ರದೇಶವಾದ ಜಮ್ಮು-ಕಾಶ್ಮೀರದ ಖರ್ದುಂಗ್ಲಾದಂತಹ ದುರ್ಗಮ ಪ್ರದೇಶಕ್ಕೆ ಪ್ರವಾಸ ಮಾಡಿದ್ದ ಯುವಕನಿಗೆ ಹೀರೋ ಸೆಂಟೆನ್ನಿಯಲ್ ಬೈಕ್ ಕೊಡುಗೆಯಾಗಿ ಬಂದಿದೆ.
ಯುವಕ ಪ್ರಜ್ವಲನ ಸಾಹಸ ಗುರುತಿಸಿದ ಹೀರೋ ಮೋಟೋ ಕಾರ್ಪ್ ಸಂಸ್ಥೆಯು ಅಂದಾಜು 14 ಲಕ್ಷ ರೂ. ಮೌಲ್ಯದ (ಆನ್ ರೋಡ್) ಹಿರೋ ಸೆಂಟೆನ್ನಿಯಲ್ ಹೊಸ ಬೈಕ್ಅನ್ನು ಕೊಡುಗೆಯಾಗಿ ನೀಡಿದೆ. ಉಡುಪಿಯ ಶಕ್ತಿ ಮೋಟರ್ಸ್ನ ಶೋರೂಮ್ನಲ್ಲಿ ಜೂನ್ 28ರಂದು ನಡೆದ ಸಂಭ್ರಮದ ಕಾರ್ಯಕ್ರಮದಲ್ಲಿ ಪ್ರಜ್ವಲನಿಗೆ ವಿನೂತನ ಮಾದರಿಯ ಬೈಕ್ಅನ್ನು ಗಿಫ್ಟ್ ಆಗಿ ಹಸ್ತಾಂತರ ಮಾಡಲಾಯಿತು. ಕೇಕ್ ಕಟ್ ಮಾಡುವ ಮೂಲಕ ಹೊಸ ಬೈಕ್ನ ಕೀ ಹಸ್ತಾಂತರ ಮಾಡಲಾಯಿತು.
ಉಡುಪಿ ಶಕ್ತಿ ಮೋಟರ್ಸ್ನ ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್ ಟಿ. ಕರ್ಣೆ, ವ್ಯವಸ್ಥಾಪಕ ರಾಹುಲ್ ಮೀರಜ್ಕರ್, ಪ್ರಜ್ವಲ ಶೆಣೈ ಅವರ ಬೆಂಗಳೂರಿನ ಮಿತ್ರ ನಿಖಿಲ್ ಆರ್., ತಂದೆ ರಾಜೇಂದ್ರ ಶೆಣೈ, ತಾಯಿ ರಜನಿ ಶೆಣೈ, ಸಹೋದರಿ ಪ್ರಾರ್ಥನಾ ಶೆಣೈ ಹಾಗೂ ಶೋರೂಮ್ನ ಸಿಬ್ಬಂದಿ ಇದ್ದರು.
ಕರ್ನಾಟಕದಲ್ಲಿಯೇ ಇದೊಂದು ಹೆಮ್ಮೆಯ ವಿಚಾರ. ಪಾನ್ ಇಂಡಿಯಾ ಸ್ಪರ್ಧೆಯಲ್ಲಿ ನನ್ನ ಹೆಸರನ್ನು ಸಂಸ್ಥೆಯು ಆಯ್ಕೆ ಮಾಡಿತ್ತು. ಅದರಲ್ಲಿ 'ಬೆಸ್ಟ್ ಕಸ್ಟಮರ್' ಪ್ರಶಸ್ತಿ ನನಗೆ ಲಭಿಸಿತ್ತು. ಆ ಹಿನ್ನೆಲೆಯಲ್ಲಿ ಹೀರೋ ಸೆಂಟೆನ್ನಿಯಲ್ ಬೈಕ್ ಕೊಡುಗೆಯಾಗಿ ಗಿಫ್ಟ್ ನೀಡಿದ್ದಾರೆ. ಜಾಕೆಟ್, ಗ್ಲೌಸ್, ಹೆಲ್ಮೆಟ್ ಹಾಗೂ ಬೈಕ್ ರೈಡಿಂಗ್ನ ಎಲ್ಲ ಪರಿಕರಗಳನ್ನೂ ಉಡುಗೊರೆಯಾಗಿ ನೀಡಿದ್ದಾರೆ. ಏನೋ ಒಂದು ಬಗೆಯ ಸಂತಸ ಮನೆ ಮಾಡಿದೆ. | ಪ್ರಜ್ವಲ ಶೆಣೈ. ಬೈಕ್ ಪಡೆದ ಶಿರ್ವದ ಯುವಕ ಹೀರೋ ಮೋಟೋ ಕಾರ್ಪ್ ಸಂಸ್ಥೆಯ ಸಂಸ್ಥಾಪಕ ಡಾ. ಬ್ರಿಜ್ ಮೋಹನಲಾಲ್ ಮುಂಜಾಲ್ ಅವರ 101ನೇ ಜನ್ಮದಿನದ ಸವಿನೆನಪಿಗಾಗಿ ಇಂತಹ 100 ಬೈಕ್ಗಳನ್ನು ತಯಾರಿಸಲಾಗಿದೆ. ಕರ್ನಾಟಕದ ಪ್ರಜ್ವಲನಿಗೆ 'ಬೆಸ್ಟ್ ಕಸ್ಟಮರ್' ಮಾನದಂಡವಾಗಿ ಹೀರೋ ಸೆಂಟೆನ್ನಿಯಲ್ ಬೈಕ್ ಗಿಫ್ಟ್ ನೀಡಲಾಗಿದೆ. ನಮಗೂ ಸಹ ಇದು ಸಂಭ್ರಮದ ಕ್ಷಣವಾಗಿದೆ. | ವಿಜಯಕುಮಾರ್ ಟಿ. ಕರ್ಣೆ. ಉಡುಪಿ ಶಕ್ತಿ ಮೋಟರ್ಸ್ನ ವ್ಯವಸ್ಥಾಪಕ ನಿರ್ದೇಶಕ