ಹಣ ಡಬಲ್​ ಮಾಡುವ ಆಸೆ ತೋರಿಸಿ ವಂಚನೆ

cyber crime
Published on

ರಾಮನಗರ: ಆನ್​ಲೈನ್​ ಮೂಲಕ ಹಣ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸುವ ಆಸೆಯಿಂದ 3.20 ಲಕ್ಷ ರೂ. ಕಳೆದುಕೊಂಡಿರುವ ಪ್ರಕರಣ ರಾಮನಗರ ಸಿಇಎನ್​ ಠಾಣೆಯಲ್ಲಿ ದಾಖಲಾಗಿದೆ.

ಕನಕಪುರದ ಸಂತೋಷ್​ ಹಣ ಕಳೆದುಕೊಂಡವರು. ಹಾರೋಹಳ್ಳಿಯ ಖಾಸಗಿ ಕಂಪನಿಯೊಂದರ ಉದ್ಯೋಗಿ ಆಗಿರುವ ಸಂತೋಷ್​ ಅವರ ಮೊಬೈಲ್​ಗೆ ಇತ್ತೀಚೆಗೆ ಸಂದೇಶ ಒಂದು ಬಂದಿದ್ದು, ಟಾಸ್ಕ್​ ಪೂರ್ಣಗೊಳಿಸಬೇಕು ಅಥವಾ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭಗಳಿಸಬಹುದು ಎಂದು ನಂಬಿಸಿದ್ದಾರೆ.

ಇದರಂತೆ ಟೆಲಿಗ್ರಾಂ ಲಿಂಕ್​ನಲ್ಲಿ ನೋಂದಣಿ ಮಾಡಿಕೊಂಡು ಮೊದಲಿಗೆ 1000 ರೂ ಹೂಡಿಕೆ ಮಾಡಿದ್ದು, ನಂತರ ಇವರಿಗೆ 1420 ರೂ ವಾಪಾಸ್​ ಬಂದಿದೆ. ಹೀಗೆ ಎರಡು ಮೂರು ಬಾರಿ ಹೂಡಿಕೆ ಮಾಡಿದ್ದಕ್ಕಿಂತ ಹೆಚ್ಚಿನ ಹಣವನ್ನು ವಂಚಕರು ಸಂತೋಷ್​ ಖಾತೆಗೆ ಜಮೆ ಮಾಡಿದ್ದಾರೆ.

ಇದನ್ನು ನಂಬಿದ ಸಂತೋಷ್​ ಹಂತ ಹಂತವಾಗಿ 3,19,780 ರೂ.ಗಳನ್ನು ತಮ್ಮ ಹಾಗೂ ತಮ್ಮ ಸ್ನೇಹಿತರ ಖಾತೆಯಿಂದ ವರ್ಗಾವಣೆ ಮಾಡಿದ್ದಾರೆ. ನಂತರ ಮೋಸ ಹೋಗಿರುವುದು ಗೊತ್ತಾಗಿದ್ದು, ಆರೋಪಿಗಳನ್ನು ಪತ್ತೆ ಮಾಡಿ ಹಣ ಕೊಡಿಸಿಕೊಡುವಂತೆ ಸಿಇಎನ್​ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net