

ಹುಬ್ಬಳ್ಳಿ: ಮನೆಯಲ್ಲಿ ಕುಳಿತು ಕೆಲಸ ಮಾಡಿ ಲಾಭ ಗಳಿಸಬಹುದೆಂದು ನಂಬಿಸಿದ ಖದೀಮರು, ವ್ಯಕ್ತಿಗಳಿಬ್ಬರಿಂದ ಹಂತ ಹಂತವಾಗಿ ಆನ್ಲೈನ್ ಮೂಲಕ ಒಟ್ಟು 10.30 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಧಾರವಾಡದ ಜಬಿಉಲ್ಲಾ ಮುಲ್ಲಾ ಎಂಬುವರಿಂದ 4.35 ಲಕ್ಷ ರೂ., ಭೈರಿದೇವರಕೊಪ್ಪದ ಅಮಿತ್ ರೊಳ್ಳಿ ಎಂಬುವರಿಂದ 5.95 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ನಾವು ಕಳಿಸುವ ವಿಡಿಯೋಗಳಿಗೆ ಲೈಕ್, ಶೇರ್, ಸಬ್ಸ್ಕ್ರೈಬ್ ಮಾಡಿದರೆ ಮತ್ತು ಪಾಸಿಟಿವ್ ಕಮೆಂಟ್ ಮಾಡಿದರೆ ಸಾಕು ಹೆಚ್ಚು ಲಾಭ ಗಳಿಸಬಹುದು ಎಂದಿದ್ದಾರೆ. ನಂತರ ಸ್ವಲ್ಪ ಲಾಭದಾಸೆ ತೋರಿಸಿದ್ದಾರೆ. ಅವರಿಂದ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದಾರೆ. ಸಿಇಎನ್ ಕ್ರೖೆಂ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.