ವರ್ಕ್ ಫ್ರಂ ಹೋಂ ಹೆಸರಲ್ಲಿ ವಂಚನೆ

cyber crime
Published on

ರಾಮನಗರ: ವರ್ಕ್ ಫ್ರಂ ಹೋಂ ಹೆಸರಲ್ಲಿ ಓರ್ವ ಗೃಹಿಣಿ ಮತ್ತು ಯುವಕನನ್ನು ನಂಬಿಸಿ 27 ಲಕ್ಷ ರೂ ಗಳನ್ನು ಆನ್‌ಲೈನ್ ಮೂಲಕ ವಂಚಿಸಿರುವ ಎರಡು ಪ್ರತ್ಯೇಕ ಪ್ರಕರಣಗಳು ರಾಮನಗರ ಸಿಇಎನ್ ಠಾಣೆಯಲ್ಲಿ ದಾಖಲಾಗಿದೆ.

ಮಾಗಡಿಯ ಕುಸುಮಾ 24.5 ಲಕ್ಷ ರೂ.ಗಳನ್ನು ಕಳೆದುಕೊಂಡರೆ ಬಿಡದಿಯ ಶರತ್ ಎಂಬುವರು 2.5 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.

ಇಬ್ಬರಿಗೂ ವರ್ಕ್ ಫ್ರಂ ಹೋಂ ಕೆಲಸ ಮಾಡುತ್ತಿರಾ ಎಂದು ವಂಚಕರು ಕರೆ ಮಾಡಿದ್ದಾರೆ. ಈ ವೇಳೆ ಇಬ್ಬರೂ ಒಪ್ಪಿದ ಕಾರಣ ಟೆಲಿಗ್ರಾಂ ಆ್ಯಪ್‌ನಲ್ಲಿನ ಗುಂಪೊಂದಕ್ಕೆ ಸೇರ್ಪಡೆ ಆಗುವಂತೆ ಸೂಚಸಿ, ಗೂಗಲ್‌ನಲ್ಲಿ ರಿವ್ಯೆವ್ ಬರೆದರೆ, ಹಣ ನೀಡುವಾಗಿ ಹೇಳಿ ಆರಂಭಿಕ ಹಂತದಲ್ಲಿ ನಂಬಿಕೆ ಹುಟ್ಟಿಸಲು ಕೊಂಚ ಹಣವನ್ನು ಕಳುಹಿದ್ದಾರೆ. ಯಾವುದೇ ಹೂಡಿಕೆ ಇಲ್ಲದ ಹಣ ಬಂದ ಹಿನ್ನೆಲೆಯಲ್ಲಿ ಇಬ್ಬರಿಗೂ ಹೆಚ್ಚಿಗೆ ಹಣ ಹೂಡಿಕೆ ಮಾಡಲು ಪ್ರೇರೇಪಿಸಿ, ಪ್ರತಿಯಾಗಿ ಮತ್ತೆ ಹಣವನ್ನು ಕೊಟ್ಟಿದ್ದಾರೆ.

ನಂತರ ಅಸಲಿ ಆಟ ಶುರುವಿಟ್ಟುಕೊಂಡ ವಂಚಕರು, ಬ್ಯಾಂಕ್ ಖಾತೆ ಫ್ರೀಜ್ ಆಗಿದೆ, ಇದನ್ನು ಅನ್ ಫ್ರೀಜ್ ಮಾಡಲು ಹಣ ಕಟ್ಟಬೇಕು ಎಂದು ಸೂಚನೆಯನ್ನು ನೀಡಿದ್ದಾರೆ. ಇದನ್ನು ನಂಬಿದ ಕುಸುಮಾ ಮತ್ತು ಶರತ್ ಅವರ ಹೇಳಿದಂತೆ ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ.

ಕುಸುಮಾ 2441903 ರೂ,ಗಳನ್ನು ಕಳೆದುಕೊಂಡರೆ ಶರತ್ 252173 ರೂ,ಗಳನ್ನು ಕಳೆದುಕೊಂಡಿದ್ದು, ಯಾವುದೇ ಹಣ ವಾಪಾಸ್ ಬಂದಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net